ಮಡಿಕೇರಿ ಅ.2 : ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ *ಪಬ್ಲಿಕ್ ಟಿವಿ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಾಣ ಮಾಡಿರುವ *ಕಂಪ್ಯೂಟರ್ ಕೊಠಡಿ* ಲೋಕಾರ್ಪಣೆ ಕಾರ್ಯಕ್ರಮ ಅ.4 ರಂದು ನಡೆಯಲಿದೆ.
ಬೆಳಗ್ಗೆ 11 ಗಂಟೆಗೆ ಸರಸ್ವತಿ ಪೂಜೆ ಹಾಗೂ ಸಂಜೆ 4 ಗಂಟೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನೂತನ ಕೊಠಡಿಯನ್ನು ಬೆಂಗಳೂರಿನ ಪಬ್ಲಿಕ್ ಟಿವಿ ಕೇಂದ್ರ ಕಚೇರಿಯಿಂದ ಉದ್ಘಾಟನೆ ಮಾಡಲಾಗುವುದು ಎಂದು ಪಬ್ಲಿಕ್ ಟಿವಿಯ ಕೊಡಗು ಜಿಲ್ಲಾ ವರದಿಗಾರ ಮಲ್ಲಿಕಾರ್ಜುನ್ ಮಡಿಕೇರಿ ತಿಳಿಸಿದ್ದಾರೆ.










