ಮಡಿಕೇರಿ ಅ.5 : ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯು ಇತ್ತೀಚೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಟೆಬಲ್ ಟೆನ್ನಿಸ್ ಒಳಾಂಗಣ ಕ್ರೀಡೆ ನಡೆದಿದ್ದು, ಅಪರ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಯುವ ಸಬಲೀಕರಣ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ, ಜನನಿ ಆರೋಗ್ಯ ಕೇಂದ್ರದ ಡಾ.ನವೀನ್ ಎಂ.ಎಸ್, ಡಾ ರಾಜೇಶ್ವರಿ ಬಿ.ಕೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪುರುಷರ ವಿಭಾಗ ಸಿಂಗಲ್ಸ್ ನಲ್ಲಿ ವಿಜೇತರು ಪಿ.ಎಲ್.ಮಂಜುನಾಥ್, ರನ್ನರ್ ಕೋರನ ಕುಮರೇಶ್, ಪುರುಷರ ವಿಭಾಗ ಡಬ್ಬಲ್ಸ್ ನಲ್ಲಿ ವಿಜೇತರು ಡೇರಿಕ್ ಹಾಗೂ ರಚನ್ ಪೊನ್ನಪ್ಪ, ರನ್ನರ್ ಪಿ.ಎಲ್ ಮಂಜುನಾಥ್ ಹಾಗೂ ರಾಮ್ ಜೀವ್, ಮಹಿಳೆಯರ ವಿಭಾಗ ಸಿಂಗಲ್ಸ್ ವಿಜೇತರು ನಮಿತಾ ಪೊನ್ನಪ್ಪ, ರನ್ನರ್ ರೀನಾ ಅನಿಲ್, ಮಹಿಳೆಯರ ವಿಭಾಗ ಡಬ್ಬಲ್ಸ್ ವಿಜೇತರು ಸ್ವಾತಿ ತಂಗಮ್ಮ ಹಾಗೂ ನಮಿತ ಪೊನ್ನಪ್ಪ, ರನ್ನರ್ಸ್ ವಚನ್ ಎಂ.ಎಸ್ ಹಾಗೂ ಸಿಂಚನ ಎಂ.ಎ, ವೆಟರನ್ಸ್ ಸಿಂಗಲ್ ವಿಜೇತರು ಬಿ.ಎಲ್ ಹರೀಶ್ ರನ್ನರ್ ಅಜರ್ ವಾಸಿಮ್ ವೆಟರನ್ಸ್, ಡಬ್ಬಲ್ಸ್ ವಿಜೇತರು ರಾಮ್ ಜೀವ್ ಹಾಗೂ ಬಿ.ಎಲ್ ಹರೀಶ್, ರನ್ನರ್ಸ್ ಪ್ರವೀಣ್ ಹಾಗೂ ಆಸಿಫ್,
ಮಹಿಳೆಯರ ವೆಟರನ್ಸ್ ವಿಭಾಗ ಸಿಂಗಲ್ಸ್ ವಿಜೇತರು ಸ್ವಾತಿ ತಂಗಮ್ಮ, ರನ್ನರ್ ಪುಷ್ಪ ಕಿರಣ್, 14 ವರ್ಷ ಒಳಗಿನ ಹುಡುಗರ ಸಿಂಗಲ್ಸ್ ವಿಭಾಗ ವಿಜೇತರು ಲಿತಿಶ್ ಕೆ, ರನ್ನರ್ ಐಜಾನ್ ವಾಸಿಮ್, 14 ವರ್ಷ ಒಳಗಿನ ಹುಡುಗಿಯರ ಸಿಂಗಲ್ಸ್ ವಿಭಾಗ ವಿಜೇತರು ಸಿಂಚನ ಎಂ.ಎ, ರನ್ನರ್ ವಚನ್ ಎನ್.ಎಸ್, 18 ವರ್ಷ ಕೆಳಗಿನ ಹುಡುಗರ ಸಿಂಗಲ್ ವಿಭಾಗ ವಿಜೇತರು ಸಹಾದ್ ಎಸ್, ರನ್ನರ್ ಪ್ರಜ್ವಲ್ ಎಚ್.ಎನ್, 18 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ವಿಭಾಗ ವಿಜೇತರು ಫಿದಾ ಕೆ.ಎಚ್. ರನ್ನರ್ ಖ್ಯಾತಿ ಕಾವೇರಮ್ಮ.








