ಗೋಣಿಕೊಪ್ಪ ಅ.5 : ಶ್ರೀ ಕಾವೇರಿ ದಸರಾ ಸಮಿತಿ 45ನೇ ವರ್ಷದ ದಸರಾ ಜನೋತ್ಸವದ ಆಂಗವಾಗಿ ಅ.22ರಂದು (ಭಾನುವಾರ)
ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ರಾಜ್ಯ ಮಟ್ಟದ ‘ದಸರಾ ಬಹುಭಾಷಾ ಕವಿಗೋಷ್ಠಿ’ಯನ್ನು ಕಾವೇರಿ ಕಲಾ ವೇದಿಕೆಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಕವನಗಳನ್ನು ಆಹ್ವಾನಿಸಲಾಗಿದೆ ಎಂದು ಕವಿಗೋಷ್ಟಿ ಸಮಿತಿ ಸಂಚಾಲಕ ಜಗದೀಶ್ ಜೋಡುಬೀಟಿ ತಿಳಿಸಿದ್ದಾರೆ.
ಯಾವುದೇ ವಯೋಮಾನದವರು ಯಾವುದೇ ವಸ್ತು-ವಿಷಯ ಕುರಿತು ರಚಿಸಿದ ಸ್ವ-ರಚಿತ ಕವಿತೆಗಳು, ಗಜಲ್, ಚುಟುಕುಗಳು, ಕನ್ನಡ, ಅರೆಭಾಷೆ, ಕೊಡವ, ಎರವ, ತುಳು, ಹಿಂದಿ, ಇಂಗ್ಲೀಷ್, ತೆಲುಗು, ತಮಿಳು, ಮಲಯಾಳಿ ಮತ್ತು ಇನ್ನಿತರ ಭಾಷೆಗಳಲ್ಲಿ ರಚಿಸಿದ ಮತ್ತು ಇದುವರೆಗೆ ಎಲ್ಲಿಯೂ ಪ್ರಕಟವಾಗದ ಕವಿತೆಗಳನ್ನು ಕಳುಹಿಸಿಕೊಡಬಹುದಾಗಿದೆ.
ಆಯ್ಕೆಯಾದ ಕವಿತೆಗಳನ್ನು ಕವಿಗಳಿಗೆ 22ರಂದು ನಡೆಯುವ ಕವಿಗೋಷ್ಠಿಯಲ್ಲಿ ವಾಚಿಸಲು ಅವಕಾಶವಿರಲಿದೆ. ಕವಿತೆಗಳನ್ನು ಅ.14ರೊಳಗೆ ತಲುಪುವಂತೆ ಜಗದೀಶ್ ಜೋಡುಬೀಟಿ, ಸಂಚಾಲಕ, ಕವಿಗೋಷ್ಠಿ ಸಮಿತಿ, ಶ್ರೀ ಉಮಾಮಹೇಶ್ವರಿ ಬಡಾವಣೆ , ಒಂದನೇ ವಿಭಾಗ, ಮೂರನೇ ಕ್ರಾಸ್ –571213, ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ 9980000845 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.








