

ಮಡಿಕೇರಿ NEWS DESK ಫೆ.15 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೀಡಲಾಗುವ ಪತ್ರಿಕಾರಂಗದ ಭೀಷ್ಮ ಬಿ.ಎಸ್.ಗೋಪಾಲಕೃಷ್ಣ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಕೊಡಗು ಪತ್ರಕತ೯ರ ಸಂಘದ ಸಹಯೋಗದಲ್ಲಿ ಫೆ.19 ರಂದು ಸಂಜೆ 6 ಗಂಟೆಗೆ ಮಡಿಕೇರಿಯಲ್ಲಿ ಆಯೋಜಿಸಲಾಗಿದೆ. ಮಡಿಕೇರಿಯ ವೈದ್ಯ, ಸಾಹಿತಿ ಡಾ.ಕೆ.ಬಿ.ಸೂಯ೯ಕುಮಾರ್ ಅವರಿಗೆ ಅಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಗರದ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ನಡೆಯುವ ಸಮಾರಂಭವನ್ನು ಹಿರಿಯ ಸಾಹಿತಿ ಬಿ.ಎ.ಷಂಶುದ್ದೀನ್ ಉದ್ಘಾಟಿಸಲಿದ್ದಾರೆ. ದಿ.ಬಿ.ಎಸ್.ಗೋಪಾಲಕೃಷ್ಣ ದತ್ತಿ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಬಾಲಸುಬ್ರ್ರಹ್ಮಣ್ಯ ಕಂಜಪ೯ಣೆ ಅವರು ಡಾ.ಕೆ.ಬಿ.ಸೂಯ೯ಕುಮಾರ್ ಅವರಿಗೆ ಪ್ರದಾನ ಮಾಡಲಿದ್ದಾರೆ.

ಕೊಡಗು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವಕಾಮತ್ ಅಧ್ಯಕ್ಷತೆಯಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಹಿರಿಯ ಪತ್ರಕತ೯ರಾದ ಜಿ.ರಾಜೇಂದ್ರ, ಬಿ.ಜಿ. ಅನಂತಶಯನ, ಟಿ.ಪಿ. ರಮೇಶ್, ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಪಾಲ್ಗೊಳ್ಳಲಿದ್ದಾರೆ ಎಂದು ಕಸಾಪ ಪ್ರಕಟಣೆ ತಿಳಿಸಿದೆ.









