ಮಡಿಕೇರಿ ಅ.6 : ನೆಲ್ಯಹುದಿಕೇರಿಯ ಅಭ್ಯತ್ ಮಂಗಲ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನವಾಗಿ ಅಧ್ಯಕ್ಷರಾಗಿ ವಿ.ಕೆ.ಲೋಕೇಶ್ ಹಾಗೂ ಉಪಾಧ್ಯಕ್ಷರಾಗಿ ತೋಟಂಬೈಲು ಪ್ರಸನ್ನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯಾಗಿ ಕುಶಾಲನಗರ ಕಂದಾಯ ಇಲಾಖೆ ಅಧಿಕಾರಿ ಚೇತನ್ ಕಾರ್ಯಪ್ಪ ಕಾರ್ಯನಿರ್ವಹಿಸಿದರು.








