ಮಡಿಕೇರಿ ಅ.6 : ಬಜರಂಗದಳದ ಶೌರ್ಯ ಜಾಗರಣ ರಥಯಾತ್ರೆ ಕೊಡಗಿನ ವಿವಿಧೆಡೆ ಭವ್ಯ ಸ್ವಾಗತ ಕೋರಿದರು.
ಮಡಿಕೇರಿಗೆ ಆಗಮಿಸಿದ ರಥಯಾತ್ರೆಯಾತ್ರೆಯೂ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಕೇರಳದ ಚಂಡೆ ವಾದ್ಯಗಳೊಂದಿಗೆ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತಕ್ಕೆ ಆಗಮಿಸಿದ ಶೌರ್ಯ ಜಾಗರಣಾ ರಥಕ್ಕೆ ಮಾಜೀ ಶಾಸಕ ಕೆ.ಜಿ. ಬೋಪಯ್ಯ ಅವರು ತೆಂಗಿನ ಕಾಯಿ ಒಡೆದು, ಪುಷ್ಪರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಬಳಿಕ ವಾದ್ಯಗೋಷ್ಟಿಯ ಸಹಿತ ಮೆರವಣಿಯೆ ಮೂಲಕ ಜನರಲ್ ತಿಮ್ಮಯ್ಯ ವೃತ್ತದವರೆಗೆ ಮೆರವಣಿಗೆ ಸಾಗಲಾಯಿತು. ಈ ಸಂದರ್ಭ ವೇದ ಮಂತ್ರಘೋಷಗಳ ಸಹಿತ ರಥಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ಸಂಪಾಜೆ ಮಾರ್ಗವಾಗಿ ಪುತ್ತೂರು ಕಡೆಗೆ ರಥವನ್ನು ಬೀಳ್ಕೊಡಲಾಯಿತು. ಇದಕ್ಕೂ ಮುನ್ನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪ್ರತಿಮೆಗೆ ಗಣ್ಯರು ಸಹಿತ ಸಂಘಟನೆಗಳ ಪ್ರಮುಖರು ಪುಷ್ಪಾರ್ಚನೆ ನಡೆಸಿ ಗೌರವ ಸಮರ್ಪಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕೃಷ್ಣ ಮೂರ್ತಿ, ವಿಶ್ವ ಹಿಂದೂ ಪರಿಷತ್ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂವತ್ಸರದಲ್ಲಿ 1964ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, 2023-24ರಲ್ಲಿ ಷಷ್ಟಿ ಪೂರ್ಣ ವರ್ಷಾಚರಣೆ ನಡೆಸುತ್ತಿದೆ. ಇದರ ಅಂಗವಾಗಿ ಈಡೀ ದೇಶಾದ್ಯಂತ ಶೌರ್ಯ ಜಾಗರಣಾ ರಥ ಯಾತ್ರೆ ನಡೆಸಲಾಗುತ್ತಿದ್ದು, ಸಮಾಜದ ವಿವಿಧ ಸ್ಥರಗಳಲ್ಲಿರುವ ಹಿಂದೂಗಳನ್ನು ಒಂದು ಗೂಡಿಸಿಸುವ ಉದ್ದೇಶ ರಥಯಾತ್ರೆ ಹೊಂದಿದೆ ಎಂದು ಹೇಳಿದರು. ರಾಷ್ಟ್ರ ಹಿತದ ಕಾರ್ಯ ಮಾಡುವ ಮೂಲ ಉದ್ದೇಶವನ್ನೂ ರಥಯಾತ್ರೆ ಒಳಗೊಂಡಿದೆ ಎಂದು ವಿವರಿಸಿದರು. ಈ ಸಂದರ್ಭ ಮಾಜೀ ಶಾಸಕ ಕೆ.ಜಿ. ಬೋಪಯ್ಯ, ವಿಶ್ವ ಹಿಂದೂ ಪರಿಷತ್‍ನ ಮುಖಂಡರಾದ ಸುರೇಶ್ ಮುತ್ತಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಅರುಣ್ ಕುಮಾರ್, ಜಿಲ್ಲಾ ವಕ್ತಾರ ಮಹೇಶ್ ಜೈನಿ, ನಗರಾಧ್ಯಕ್ಷ ಮನು ಮಂಜುನಾಥ್, ನಗರ ಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯ ಕೆ.ಎಸ್.ರಮೇಶ್, ಅಪ್ಪಣ್ಣ, ಸಬಿತಾ, ಕಲಾವತಿ, ಬಿಜೆಪಿ ಪ್ರಮುಖರಾದ ಅರುಣ್ ಕುಮಾರ್, ಜಗದೀಶ್, ಮಹಿಳಾ ಮೋರ್ಚಾದ ಕನ್ನಿಕೆ, ಕುಡೆಕಲ್ ಸವಿತಾ ಸಂತೋಷ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
ಸುಂಟಿಕೊಪ್ಪ :: ಹಿಂದು ಕಾರ್ಯಕರ್ತರು ಕುಶಾಲನಗರದಿಂದ ಸುಂಟಿಕೊಪ್ಪಕ್ಕೆ ಆಗಮಿಸಿದ ಸಂದರ್ಭ ಅಯ್ಯಪ್ಪಸ್ವಾಮಿ ದೇವಸ್ಥಾನ ಬಳಿ ಬಜರಂಗದಳದ ಕಾರ್ಯಕರ್ತರು ಅದ್ದೂರಿ ಸ್ವಾಗತಕೋರಿ ಪಟ್ಟಣದ ಮುಖ್ಯಬೀದಿಯಲ್ಲಿ ಚಂಡೆಯೊಂದಿಗೆ ಶೌರ್ಯ ಜಾಗರಣ ರಥದೊಂದಿಗೆ ಮೆರವಣಿಗೆ ಸಮೇತ ಆಗಮಿಸಿ ಕನ್ನಡ ವೃತ್ತದಲ್ಲಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗದ್ದೆಹಳ್ಳದ ವರೆಗೆ ತೆರಳಿ ಬಿಳ್ಕೋಡಲಾಯಿತು.
ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾ ವಿಶ್ವ ಹಿಂದೂ ಪರಿಷತ್ ಮಾಜಿ ಕಾರ್ಯದರ್ಶಿಗಳಾದ ಚಿ.ನಾ.ಸೋಮೇಶ್, ಡಿ.ನರಸಿಂಹ, ಪಟ್ಟೆಮನೆ ಉದಯಕುಮಾರ್, ಪಿ.ಆರ್.ಸುನಿಲ್‍ಕುಮಾರ್, ಧನು ಕಾವೇರಪ್ಪ, ಪಿ.ಆರ್.ಸುಕುಮಾರ್, ಬಿ.ಕೆ.ಮೋಹನ್, ಸೋಮಯ್ಯ, ಕನಿಶ್, ಪಟ್ಟೆಮನೆ ಗಿರೀಶ್, ಎಂ.ಆರ್.ಶಶಿಕುಮಾರ್, ಸುನಿಲ್, ವಾಸು, ನಾಗೇಶ್ ಪೂಜಾರಿ ಸೇರಿದಂತೆ ಹಿಂದು ಸಂಘಟನೆಯ ಪದಾಧಿಕಾರಿಗಳು ಹಾಗೂ ಬಿಜೆಪಿ ಪ್ರಮುಖರು ಹಾಜರಿದ್ದರು.









