ಮಡಿಕೇರಿ ಅ.6 : 2023 ನೇ ಸಾಲಿನ ಮಡಿಕೇರಿ ದಸರಾ ಸ್ವಾಗತ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಇಂದು ನಗರದ ದಸರಾ ಸಮಿತಿ ಕಚೇರಿಯಲ್ಲಿ ನಡೆಯಿತು.
ಸಮಿತಿಯ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾಗಿ ಎ.ಜಿ.ರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಯಕ್ಷಿತ್ ಅಪ್ಪಯ್ಯ ಕೊತ್ತೋಳಿ, ಖಜಾಂಚಿಯಾಗಿ ಆರ್.ಪಿ.ಚಂದ್ರಶೇಖರ್ ಸಹ ಕಾರ್ಯದರ್ಶಿಯಾಗಿ ಹಬೀಬ್ ಅಹಮ್ಮದ್ ಹಾಗೂ ಗೌರವ ಸಲಹೆಗಾರರಾಗಿ ಶೇಕ್ ಅಹಮ್ಮದ್ ಆಯ್ಕೆಯಾದರು.









