ಮಡಿಕೇರಿ ಅ.9 : ವಿರಾಜಪೇಟೆ ಕ್ಷೇತ್ರದ ಎಲ್ಲರನ್ನೂ ಒಳಗೊಂಡಂತೆ ಸಮಾನತೆಯ ಆಧಾರದಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಗೆ ಬದ್ದನಾಗಿದ್ದೇನೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭರವಸೆ ನೀಡಿದರು.
ಬೇತ್ರಿಯಲ್ಲಿ ನಡೆದ ಈದ್ ಮಿಲಾದ್ ಹಬ್ಬದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಬಹಳಷ್ಟು ನಿರೀಕ್ಷೆ ಮತ್ತು ಭರವಸೆಗಳನಿಟ್ಟು ತಮ್ಮನ್ನು
ಶಾಸಕನಾಗಿ ಆಯ್ಕೆ ಮಾಡಿದ ಜನತೆಯ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಕಟಿಬದ್ಧನಾಗಿದ್ದೇನೆ
ಯಾವುದೇ ಕಾರಣಕ್ಕೂ ಕರ್ತವ್ಯದಿಂದ ವಿಮುಖನಾಗಲಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆ ಹರಿಸುವಂತೆ ಮನವಿ ಮಾಡಿದರು. ಸದ್ಯದಲ್ಲಿಯೇ ಸಮಸ್ಯೆಯನ್ನು ಬಗೆ ಹರಿಸುವ ಎ.ಎಸ್.ಪೊನ್ನಣ್ಣ ಭರವಸೆಯನ್ನು ನೀಡಿದರು.








