ಮಡಿಕೇರಿ, ಅ.9: ಕೊಡಗು ಜಿಲ್ಲಾ ಸರಕಾರಿ ವಕೀಲರ ತೆರವಾದ ಸ್ಥಾನಕ್ಕೆ ಮಡಿಕೇರಿ ವಕೀಲರಾದ ಎನ್. ಶ್ರೀಧರನ್ ನಾಯರ್ ಅವರನ್ನು ಕರ್ನಾಟಕ ಸರಕಾರ ಕಾನೂನು ಇಲಾಖೆಯು ಮುಂದಿನ ಆದೇಶದವರೆಗೆ ನೇಮಿಸಿದೆ.
ಇವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದಿನ ಸರಕಾರದ ಅವಧಿಯಲ್ಲಿಯೂ ಕೊಡಗು ಜಿಲ್ಲಾ ಸರಕಾರಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕೊಡಗು ಜಿಲ್ಲಾ ಕಾಂಗ್ರೆಸ್ ಕಾನೂನು ವಿಭಾಗದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.








