ಮಡಿಕೇರಿ ಅ.9: ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನದ ‘ಸೀರತುನ್ನಬಿ’ ಕಾರ್ಯಕ್ರಮದ ಅಂಗವಾಗಿ ಮಡಿಕೇರಿಯ ಅಹ್ಮದಿಯಾ ಮುಸ್ಲಿಂ ಜಮಾಅತ್ ವತಿಯಿಂದ ನಗರದ ವಿವಿಧ ಕಡೆಗಳಲ್ಲಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದ ಪೌರಕಾರ್ಮಿಕರಿಗೆ ಬೆಳಗ್ಗಿನ ಉಪಾಹಾರ ನೀಡಲಾಯಿತು.
ಈ ಸಂದರ್ಭ ಮಡಿಕೇರಿಯ ಅಹ್ಮದಿಯಾ ಜಮಾಅತ್ ಮಸೀದಿಯ ಧರ್ಮಗುರು ಮೌಲವಿ ಖಲೀಂ ಖಾನ್ ಸಾಹೇಬ್, ಅಧ್ಯಕ್ಷ ಜೆ.ಎಂ.ಶರೀಫ್, ಉಪಾಧ್ಯಕ್ಷ ಎಂ.ಬಿ.ಝಾಹಿರ್ ಅಹ್ಮದ್, ಅನ್ಸಾರ್ ವಿಭಾಗದ ಅಧ್ಯಕ್ಷ ಎಂ.ಯು.ಉಸ್ಮಾನ್, ಪ್ರಮುಖರಾದ ಎಂ.ಇ.ವಸೀಂ ಅಹ್ಮದ್, ಎಂ.ಇ.ಮುಷ್ತಾಕ್ ಅಹ್ಮದ್, ಎಂ.ಇ.ಮುಕ್ತಾರ್ ಅಹ್ಮದ್, ಮೊಹಮ್ಮದ್ ಯೂಸುಫ್, ಜೆ.ಎಂ.ನಾಸೀರ್ ಹಾಗೂ ಇತರ ಸದಸ್ಯರು ಹಾಜರಿದ್ದರು.








