ಮಡಿಕೇರಿ ಅ.9 : ನಗರದಲ್ಲಿ ನಡೆದ ಶಾಪಿಂಗ್ ಉತ್ಸವದಲ್ಲಿ ಆಯೋಜಿಸಲಾಗಿದ್ದ KODAGU”GOT TALENT ಜೂನಿಯರ್ ಸೋಲೋ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ನ 4ನೇ ತರಗತಿ ವಿದ್ಯಾರ್ಥಿನಿ ಪಿ.ಜಿ.ಸಿಂಚನ ಕಾವೇರಮ್ಮ ಪ್ರಥಮ ಸ್ಥಾನ ಪಡೆದಿದ್ದಾಳೆ.
ಕೋಪಟ್ಟಿ ಗ್ರಾಮದ ಪೊಡನೋಳನ ಗಿರೀಶ್ ಹಾಗೂ ಪವಿತ್ರ ದಂಪತಿ ಪುತ್ರಿಯಾಗಿರುವ ಸಿಂಚನ ಕಾವೇರಮ್ಮ ಮಡಿಕೇರಿಯ ನಾಟ್ಯ ಕಲಾ ಡ್ಯಾನ್ಸ್ ಸ್ಟುಡಿಯೋದ ನೃತ್ಯ ತರಬೇತುದಾರ ಮತ್ತು ಸಂಯೋಜಕ ಅಭಿಷೇಕ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾಳೆ.












