ಮಡಿಕೇರಿ ಅ.9 : ಜೀವನದಾರಿ ಅನಾಥಾಶ್ರಮ ಆಶ್ರಮದ ಸ್ಥಾಪಕ ರಮೇಶ್ ಅವರ ನಿಧನಕ್ಕೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತವಾರಿ ಸಚಿವರಾದ ಎನ್ ಎಸ್ ಭೋಸರಾಜು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಜೀವನದಾರಿ ಆಶ್ರಮದ ಮೂಲಕ ರಮೇಶ್ ಅವರ ಸಮಾಜಸೇವೆ ಶ್ಲಾಘನೀಯ. ಅನಾಥಾಶ್ರಮದ ಉಸ್ತುವಾರಿ ರಮೇಶ್ ಅವರ ಅಕಾಲಿಕ ಮರಣದಿಂದ ಆಶ್ರಮವಾಸಿಗಳಿಗೆ ಯಾವುದೇ ತೊಂದರೆ ಆಗಬಾರದು. ಅನಾಥಾಶ್ರಮದಲ್ಲಿರುವವರಿಗೆ ತೊಂದರೆ ಆಗದಂತೆ ಅಗತ್ಯ ಸಹಕಾರವನ್ನು ಜಿಲ್ಲಾಡಳಿತ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.










