ಮಡಿಕೇರಿ ಅ.10 : ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ‘ಗೋಡೆ ಗಡಿಯಾರ’ವನ್ನು ಕೊಡುಗೆಯಾಗಿ ನೀಡಲಾಯಿತು.
ಮಡಿಕೇರಿಯ ಮಹೇಶ್ ಎಂಟರ್ ಪ್ರೈಸಸ್‍ನ ಮಾಲೀಕರಾದ ಹರೀಶ್ ಅವರು ರೋಟರಿ ಮಿಸ್ಟಿಹಿಲ್ಸ್ ಮೂಲಕ ನೀಡಿದ ಗೋಡೆ ಗಡಿಯಾರವನ್ನು ಮಿಸ್ಟಿಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿಗೆ ಅವರಿಗೆ ಹಸ್ತಾಂತರಿಸಿದರು.
ತಿಮ್ಮಯ್ಯ ಮ್ಯೂಸಿಯಂ ವೀಕ್ಷಣೆಗೆ ಬರುವ ಸಂದರ್ಶಕರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಈ ಗೋಡೆ ಗಡಿಯಾರವನ್ನು ನೀಡುತ್ತಿರುವುದಾಗಿ ದಾನಿಗಳಾದ ಹರೀಶ್ ಹೇಳಿದರು.
ಈ ಸಂದರ್ಭ ರೋಟರಿ ಮಿಸ್ಟಿ ಹಿಲ್ಸ್‍ನ ನಿರ್ದೇಶಕರಾದ ಎ.ಕೆ.ವಿನೋದ್, ಅನಿಲ್ ಎಚ್.ಟಿ, ಮಹೇಶ್ ಎಂಟರ್ ಪ್ರೈಸಸ್ ಪಾಲುದಾರ ರಂಜಿತ್, ಸಿದ್ದಿಕಿ, ಶಮಿಕ್ ರೈ, ತಿಮ್ಮಯ್ಯ ಮ್ಯೂಸಿಯಂನ ಮೋಹನ್ ಇದ್ದರು.









