ನಾಪೋಕ್ಲು ಅ.10 : ಸಿಡಿಲು ಬಡಿದು ಮನೆಯ ವಿದ್ಯುತ್ ಮೀಟರ್ ಬೋರ್ಡು ಗೆ ಹಾನಿಯಾಗಿರುವ ಘಟನೆ ಅಜ್ಜಿಮುಟ್ಟ ಗ್ರಾಮದಲ್ಲಿ ನಡೆದಿದೆ.
ನಾಪೋಕ್ಲು ವ್ಯಾಪ್ತಿಯಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಈ ಸಂದರ್ಭ ಅಜ್ಜಿಮುಟ್ಟ ನಿವಾಸಿ ಶಿವಪ್ಪ ಪೂಜಾರಿ ಎಂಬವರ ಮನೆ ಸಮೀಪದ ಕರೆಂಟ್ ಕಂಬಕ್ಕೆ ಇಡಿಲು ಬಡಿದ ಕಾರಣ ಕಂಬ ಹಾಗೂ ಮೀಟರ್ ಬೋರ್ಡ್ ಸುಟ್ಟು ಹೋಗಿ ನಷ್ಟ ಸಂಭವಿಸಿದೆ.
ಸಿಡಿಲಿನ ರಭಸಕ್ಕೆ ಶಿವಪ್ಪನವರ ಮನೆ ಸಮೀಪದ ಅಂತೋನಿ ಎಂಬವರ ಮನೆಗೆ ಅಲಾವಡಿಸಿದ್ದ ಇನ್ವರ್ಟರ್ ಕೂಡ ಸುಟ್ಟು ಹೋಗಿದೆ. ಅವಘಡದಿಂದಾಗಿ ಬಹುತೇಕ ಮನಗಳಿಗೆ ಕರೆಂಟ್ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ವರದಿ : ದುಗ್ಗಳ ಸದಾನಂದ









