ವಿರಾಜಪೇಟೆ ಅ.17 : ಮೈಸೂರಿನಲ್ಲಿ ನಡೆಯಲಿರುವ ದಸರಾ ಕವಿಗೋಷ್ಠಿಗೆ ಮಡಿಕೇರಿಯ ವಿ.ಜೆ.ಮೌನ ಆಯ್ಕೆಯಾಗಿದ್ದಾಳೆ.
ಮಡಿಕೇರಿಯ ವಿ.ಹೆಚ್. ಜಯಕುಮಾರ್ ಹಾಗೂ ಉಪನ್ಯಾಸಕಿ ಕೆ.ಜಯಲಕ್ಷ್ಮಿ ಅವರ ಪುತ್ರಿಯಾಗಿರುವ ವಿ.ಜೆ.ಮೌನ ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಇ ವ್ಯಾಸಂಗ ಮಾಡುತ್ತಿದ್ದಾಳೆ.










