ವಿರಾಜಪೇಟೆ ಅ.17 : ಕುಕ್ಲೂರಿನಲ್ಲಿರುವ ತಾತಂಡ ಕುಟುಂಬದ ಪೊಮ್ಮಕ್ಕಡ ಒಕ್ಕೂಟದ 6ನೇ ಮಹಾಸಭೆ ತಾತಂಡ ಕುಟುಂಬದ ಐನ್ ಮನೆಯಲ್ಲಿ ನಡೆಯಿತು.
ಮಹಾಸಭೆಯ ಅಧ್ಯಕ್ಷತೆಯನ್ನು ತಾತಂಡ ಬೇಬಿ ಮಾದಯ್ಯ ವಹಿಸಿಕೊಂಡು ಕುಟುಂಭಸ್ಥರನ್ನು ಉದ್ದೇಶಿಸಿ ಮಾತನಾಡಿದರು.
ತಾತಂಡ ಪ್ರಕಾಶ್ ಹಾಗೂ ನಾಮೇರ ದಿ.ಡಾ. ಕುಟ್ಟಪ್ಪ ಅವರ ಜ್ಞಾಪಕಾರ್ಥವಾಗಿ ನೀಡಲಾದ ದತ್ತಿನಿಧಿ ಬಹುಮಾನವನ್ನು ಎಸ್.ಎಸ್.ಎಲ್.ಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ್ದ ತಾತಂಡ ಪೊನ್ನಣ್ಣ ಪಡೆದುಕೊಂಡರು.
ನಂತರ ಕುಟುಂಬದ ಸದಸ್ಯರುಗಳಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯದರ್ಶಿ ತಾತಂಡ ಯಶು ಕಬೀರ್ ಹಾಗೂ ಖಜಾಂಚಿ ತಾತಂಡ ಕವಿ ಕಾವೇರಪ್ಪ ಹಾಜರಿದ್ದರು. ತಾತಂಡ ಜ್ಯೋತಿ ಪ್ರಕಾಶ್ ನಿರೂಪಿಸಿದರು. ದಕ್ಷ ಪ್ರಾರ್ಥಿಸಿದರು. ಮೈನಾ ನವೀನ್ ಸ್ವಾಗತಿಸಿ, ತಾತಂಡ ಶೆರ್ಲಿ ಪ್ರತಾಪ್ ವಂದಿಸಿದರು.









