ಸುಂಟಿಕೊಪ್ಪ ಅ.28: ಸುಂಟಿಕೊಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಆದಿಕವಿ ವಾಲ್ಮೀಕಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಲತಾ ಮಹರ್ಷಿ ವಾಲ್ಮೀಕಿಯು ಮಹರ್ಷಿಯಾಗಿ ಪರಿವರ್ತನೆಗೊಂಡು ಮನೆ ಮನೆಗಳಲ್ಲಿ ಪಾರಾಯಣ ಮಾಡುವಂತಹ ರಾಮಾಯಾಣ ಗ್ರಂಥವನ್ನು ಬರೆದ ಕಥಾನಾಕವನ್ನು ವಿವರಿಸದರು.
ಕಾಲೇಜಿನ ಉಪನ್ಯಾಸಕಿ ಸುನೀತ ಗಿರೀಶ್ ಮತಾನಾಡಿ, ಮಹಾಕವಿ ವಾಲ್ಮೀಕಿ ಜೀವನ ಮತ್ತು ಸಂದೇಶವನ್ನು ವಿವರವಾಗಿ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು ಪಾಲ್ಗೊಂಡಿದ್ದರು.









