Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡವ ನ್ಯಾಷನಲ್ ಕೌನ್ಸಿಲ್ ನಿಂದ ಸಂಭ್ರಮದ ಎಡ್ಮ್ಯಾರ್ 1 ಆಚರಣೆ*
  • *ಮೂರ್ನಾಡು : ಏ.15 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
  • *ಶನಿವಾರಸಂತೆ ಅಂಬೇಡ್ಕರ್ ಭವನ ನಿರ್ಮಾಣ ಸಮಿತಿಯಿಂದ ಡಾ.ಅಂಬೇಡ್ಕರ್ ಜಯಂತಿಯ ಅರ್ಥಪೂರ್ಣ ಆಚರಣೆ*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.15 ರಂದು ನಡೆಯುವ ಪಂದ್ಯಗಳು*
  • *ಉಮೇಶ್ ಕುಮಾರ್ ಅವರಿಗೆ ಮಡಿಕೇರಿ ಗ್ರಾಮಾಂತರ ವೃತ್ತದ ಹೆಚ್ಚುವರಿ ಜವಾಬ್ದಾರಿ*
  • *ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕ.ರ.ವೇ ಸ್ವಾಭಿಮಾನಿ ಬಣದ ಕೊಡಗು ಘಟಕದಿಂದ ಸನ್ಮಾನ*
  • *ಹೊಸಪಟ್ಟಣದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಬಸವೇಶ್ವರ ಕನ್ನಂಬಾಡಮ್ಮ ದೇವರ ಪೂಜೋತ್ಸವ*
  • *ಹೆಬ್ಬಾಲೆಯಲ್ಲಿ ಫುಟ್ ಪಲ್ಸ್ ಉಚಿತ ಥೆರಪಿ ಶಿಬಿರ*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಮೈದಾನ 2 >>> ಏ.14 ರಂದು ಗೆಲುವು ಸಾಧಿಸಿದ ತಂಡಗಳು*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಮೈದಾನ 1 >>> ಏ.14 ರಂದು ಗೆಲುವು ಸಾಧಿಸಿದ ತಂಡಗಳು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕುಶಾಲನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ : ಮಹರ್ಷಿ ವಾಲ್ಮೀಕಿ ಅವರ ಆದರ್ಶನಗಳನ್ನು ಮೈಗೂಡಿಸಿಕೊಳ್ಳಿ : ಶಾಸಕ ಡಾ.ಮಂತರ್ ಗೌಡ ಕರೆ*
ಇತ್ತೀಚಿನ ಸುದ್ದಿಗಳು ಕರ್ನಾಟಕ

*ಕುಶಾಲನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ : ಮಹರ್ಷಿ ವಾಲ್ಮೀಕಿ ಅವರ ಆದರ್ಶನಗಳನ್ನು ಮೈಗೂಡಿಸಿಕೊಳ್ಳಿ : ಶಾಸಕ ಡಾ.ಮಂತರ್ ಗೌಡ ಕರೆ*

ಅಕ್ಟೋಬರ್ 28, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಅ.28 :  ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ  ಸಂಯುಕ್ತ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕುಶಾಲನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ  ನಡೆದ  ಕಾರ್ಯಕ್ರಮದಲ್ಲಿ  ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹಾಗೂ  ಗಣ್ಯರು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ  ಗೌರವ ಸಲ್ಲಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಪ್ರತಿಯೊಬ್ಬರು ಮಹರ್ಷಿ ವಾಲ್ಮೀಕಿ ಅವರ ಜೀವನಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅಂದು 3ನೇ ಶತಮಾದಲ್ಲಿ ಬರೆದ ರಾಮಾಯಣವನ್ನು ನಾವು ಆಗಿನಿಂದ ಈಗಿನ ವರೆಗೂ ಅಳವಡಿಸಿಕೊಡು ಬಂದಿದ್ದೇವೆ. ವಾಲ್ಮೀಕಿ ಅವರು ಬರೆದಿರುವ ರಾಮಾಯಣದಲ್ಲಿ 24000 ಶ್ಲೋಕಗಳು, 7 ಕ್ಯಾಂಟೋಗಳು ಮತ್ತು 4 ಲಕ್ಷಕ್ಕೂ ಹೆಚ್ಚು ಪದಗಳನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.
ಸುಮಾರು 10 ವರ್ಷಗಳಿಂದ ಕುಶಾಲನಗರ  ವಾಲ್ಮೀಕಿ ಸಮುದಾಯ ಭವನ ಪಾಳುಬಿದ್ದಿದ್ದು ಇದರ ದುರಸ್ತಿಗೆ ಬೇಕಾದ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿದ ಕುಶಾಲನಗರ ತಹಶೀಲ್ದಾರ್  ಕಿರಣ್ ಗೋರಯ್ಯ, ಸರ್ಕಾರದ ಆದೇಶದಂತೆ ಎಲ್ಲಾ ಧರ್ಮದ, ಜಾತಿಯ ಹಾಗೂ ಸಮಾಜದ ಗುರುಗಳ ಮಹನೀಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ವಾಲ್ಮೀಕಿ ಸಮಾಜವು ಹಿಂದಿನಿಂದಲೂ ದೊಡ್ಡ ಸಮಾಜ, ವಾಲ್ಮೀಕಿ ಅವರು ಮಹರ್ಷಿ ಆಗುವುದಕ್ಕಿಂತ ಮೊದಲು ಯಾವ ರೀತಿ ಬೇಟೆಗಾರರಾಗಿ ಇದ್ದರು ನಂತರ ಯಾವ ರೀತಿ ಮಹರ್ಷಿ ಆಗಿ ಬದಲಾದರು  ಎಂಬುದನ್ನು ವಿವರಿಸಿದ ಅವರು,  ನಮ್ಮ ಜೀವನವನ್ನು ಉತ್ತಮರನ್ನಾಗಿ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದರು.

ಪ್ರಮುಖರಾದ ಶಿವಾನಂದ  ಮಾತನಾಡಿ, ಈ ಸಮಾರಂಭ ನಡೆಸುವ ಸಲುವಾಗಿ ಪೂರ್ವ ಭಾವಿ-ಸಭೆಯನ್ನು ಸೊಮವಾರಪೇಟೆ ತಹಶೀಲ್ದಾರ್ ಸಮ್ಮುಖದಲ್ಲಿ ನಡೆಸಿರುವುದಾಗಿ ತಿಳಿಸಿದರು.

ಈ ಸಂದರ್ಭ ಶಾಸಕರಿಗೆ ಜಿಲ್ಲಾ ಮಟ್ಟದಲ್ಲಿ ವಾಲ್ಮೀಕಿ ಸಮುದಾಯ ಭವನವನ್ನು ಸ್ಥಾಪಿಸಲು ಸಹಕರಿಸಬೇಕೆಂದು ಸಂಘದ ಪರವಾಗಿ ಮನವಿ ಮಾಡಿಕೊಂಡರು.

ಮುಖ್ಯ ಭಾಷಣಗಾರರಾಗಿ ಆಗಮಿಸಿದ್ದ ವೆಂಕಟ್ ನಾಯಕ್ ಅವರು ಮಾತನಾಡಿ, ರಾಮಾಯಣ ಗ್ರಂಥದ ಪಿತಾಮಹ ಮಹರ್ಷಿ ವಾಲ್ಮೀಕಿ ಅವರು ರಾಮರಾಣ ಉಲ್ಲೇಖದ ಒಂದು ಗ್ರಂಥ ಬರೆದ ಒಬ್ಬ ಶ್ರೇಷ್ಠ ಕವಿ, ಸುಮಾರು 24000 ಶ್ಲೋಕ ಗಳನ್ನು ಒಳಗೊಂಡ ಗ್ರಂಥವಿದ್ದು, ನಮ್ಮ ರಾಷ್ಟ್ರದ ಮೊದಲ ಕವಿಯು ಅವರೇ ಆಗಿದ್ದಾರೆ. ಸುಮಾರು 500 ವರ್ಷಗಳ ಹಿಂದೆಯೇ ರಾಮನ ವಿಚಾರಗಳನ್ನು ಉಲ್ಲೇಖ ಮಾಡಿದ ಕವಿ ವಾಲ್ಮೀಕಿ. ಅವರು ಹಲವಾರು ವರ್ಷಗಳ ತಪಸ್ಸನ್ನು ಮಾಡಿದ್ದರು, ಆಗ ದೇವರು ಅವರಿಗೆ ವರವನ್ನು ಕೊಟ್ಟು ನಂತರ ಅವರು ಮಹರ್ಷಿ ಆಗುತ್ತಾರೆ. ವಾಲ್ಮೀಕಿ ಮಹರ್ಷಿ ಅವರ ಕುರಿತು ಹಲವಾರು ಕವಿಗಳು ಕೃತಿಗಳನ್ನು ರೂಪಿಸಿದ್ದಾರೆ. ಎಂದುರು.

ಜಿ.ಪಂ ಮಾಜಿ ಸದಸ್ಯ ವಿ.ಪಿ. ಶಶಿಧರ್  ಮಾತನಾಡಿ, ನಾಯಕ ಜನಾಂಗವು ಕರ್ನಾಟಕದ ಒಂದು ಪ್ರಮುಖ ಜನಾಂಗವಾಗಿದ್ದು, ನಾಯಕ ಜನಾಂಗಕ್ಕೆ ರಾಜ್ಯ ಮಟ್ಟದಲ್ಲಿ ಮನ್ನಣೆ ಸಿಗಬೇಕಿದೆ. ರಾಜ್ಯದಲ್ಲಿ ಸಾಮ್ರಾಜ್ಯ, ಕೋಟೆ ಕಟ್ಟುವಲ್ಲಿ ನಾಯಕ ಜನಾಂಗದ ಪಾತ್ರ ಬಹಳ ಇದೇ. ವಾಲ್ಮೀಕಿ ಅವರು ಮಹಾನ್ ಸಂತ ಮಹರ್ಷಿ ಆದ ವಿಚಾರಗಳನ್ನು ಮಾತನಾಡಿದರು.
ಮಹರ್ಷಿ ರಚಿಸಿದ ರಾಮಾಯಣವನ್ನು ಎಲ್ಲರು ಓದಬೇಕು ಮತ್ತು ಮೈಗೂಡಿಸಿಕೊಳ್ಳಬೇಕು ಎಂದರು.

ಸೋಮವಾರಪೇಟೆ ತಾಲ್ಲೂಕು ದಲಿತ ಸಂಘದ ಅಧ್ಯಕ್ಷ ನಿರ್ವಣಪ್ಪ ಮಾತನಾಡಿ ಈ ದಿನ ಬಹಳ ಮಹತ್ತರವಾದ ದಿನ, ವಾಲ್ಮೀಕಿ ಅವರ ಬಗ್ಗೆ ತಿಳಿದುಕೊಳ್ಳಲು ಈ ವೇದಿಕೆ ಒಂದು ಅವಕಾಶವಾಗಿದೆ. ವಿಶ್ವದಲ್ಲಿ ನಡೆಯುತ್ತಿರುವ ಈ ಕಲಘಟ್ಟದ ಬೆಳವಣಿಗೆಗಳನ್ನು ನೋಡಿದರೆ ರಾಮರಾಜ್ಯದ ಕನಸಿಗೆ ವಿರೋಧವಾಗಿದೆ ಇದೆಲ್ಲವೂ ಸರಿಯಾಗಬೇಕು ಎಂದು ಶುಭ ಕೋರಿದರು.

ನಾಯಕ ಸಮಾಜದ ಸಾಧಕರಿಗೆ ಶಾಸಕರು ಮತ್ತು ಗಣ್ಯರು ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭ ಸೋಮವಾರಪೇಟೆ ತಹಶೀಲ್ದಾರ್ ಎಸ್. ಎನ್ ನರಗುಂದ, ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಟಿ ಪರಮೇಶ್, ತಾಲ್ಲೂಕು ನಿರ್ವಣಾಧಿಕಾರಿ ಜಯಣ್ಣ, ಕುಶಾಲನಗರ ಪುರಸಭೆ ಮುಖ್ಯಧಿಕಾರಿ ಕೃಷ್ಣ ಪ್ರಸಾದ್, ಕೊಡಗು ಜಿ.ಪಂ ಮಾಜಿ ಅಧ್ಯಕ್ಷೆ ಕೆ.ಪಿ ಚಂದ್ರಕಲಾ, ಕೂಡುಮಂಗಳೂರು ಗ್ರಾ.ಪಂ  ಅಧ್ಯಕ್ಷ ಭಾಸ್ಕರ್ ನಾಯಕ ಮತ್ತು ನಾಯಕ ಸಮುದಾಯದ ಹಿರಿಯರು, ಪ್ರಮುಖರು, ಸರ್ಕಾರಿ ಸಿಬ್ಬಂಧಿಗಳು ಹಾಗೂ ಹಿತೈಷಿಗಳು  ಹಾಜರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೊಡವ ನ್ಯಾಷನಲ್ ಕೌನ್ಸಿಲ್ ನಿಂದ ಸಂಭ್ರಮದ ಎಡ್ಮ್ಯಾರ್ 1 ಆಚರಣೆ*

ಏಪ್ರಿಲ್ 14, 2026

*ಮೂರ್ನಾಡು : ಏ.15 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಏಪ್ರಿಲ್ 14, 2026

*ಶನಿವಾರಸಂತೆ ಅಂಬೇಡ್ಕರ್ ಭವನ ನಿರ್ಮಾಣ ಸಮಿತಿಯಿಂದ ಡಾ.ಅಂಬೇಡ್ಕರ್ ಜಯಂತಿಯ ಅರ್ಥಪೂರ್ಣ ಆಚರಣೆ*

ಏಪ್ರಿಲ್ 14, 2026

*ಮೂರ್ನಾಡು : ಏ.15 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಏಪ್ರಿಲ್ 14, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಏ.14  NEWS DESK  :  66/33/11 ಕೆ.ವಿ MUSS ಮಗ್ಗುಲ, ವಿರಾಜಪೇಟೆ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ 33ಏಗಿ…

*ಶನಿವಾರಸಂತೆ ಅಂಬೇಡ್ಕರ್ ಭವನ ನಿರ್ಮಾಣ ಸಮಿತಿಯಿಂದ ಡಾ.ಅಂಬೇಡ್ಕರ್ ಜಯಂತಿಯ ಅರ್ಥಪೂರ್ಣ ಆಚರಣೆ*

ಏಪ್ರಿಲ್ 14, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.15 ರಂದು ನಡೆಯುವ ಪಂದ್ಯಗಳು*

ಏಪ್ರಿಲ್ 14, 2026

*ಉಮೇಶ್ ಕುಮಾರ್ ಅವರಿಗೆ ಮಡಿಕೇರಿ ಗ್ರಾಮಾಂತರ ವೃತ್ತದ ಹೆಚ್ಚುವರಿ ಜವಾಬ್ದಾರಿ*

ಏಪ್ರಿಲ್ 14, 2026

*ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕ.ರ.ವೇ ಸ್ವಾಭಿಮಾನಿ ಬಣದ ಕೊಡಗು ಘಟಕದಿಂದ ಸನ್ಮಾನ*

ಏಪ್ರಿಲ್ 14, 2026

*ಹೊಸಪಟ್ಟಣದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಬಸವೇಶ್ವರ ಕನ್ನಂಬಾಡಮ್ಮ ದೇವರ ಪೂಜೋತ್ಸವ*

ಏಪ್ರಿಲ್ 14, 2026

*ಹೆಬ್ಬಾಲೆಯಲ್ಲಿ ಫುಟ್ ಪಲ್ಸ್ ಉಚಿತ ಥೆರಪಿ ಶಿಬಿರ*

ಏಪ್ರಿಲ್ 14, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಮೈದಾನ 2 >>> ಏ.14 ರಂದು ಗೆಲುವು ಸಾಧಿಸಿದ ತಂಡಗಳು*

ಏಪ್ರಿಲ್ 14, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಮೈದಾನ 1 >>> ಏ.14 ರಂದು ಗೆಲುವು ಸಾಧಿಸಿದ ತಂಡಗಳು*

ಏಪ್ರಿಲ್ 14, 2026

*ಕುಶಾಲನಗರ ತಾಲ್ಲೂಕು ಪತ್ರಕರ್ತರ ಸಂಘದಿಂದ ನಾಲ್ವರಿಗೆ ‘ನೇಗಿಲಯೋಗಿ’ ಪ್ರಶಸ್ತಿ*

ಏಪ್ರಿಲ್ 14, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.