ಮಡಿಕೇರಿ ಅ.29 : ಮಾದಾಪುರದ ಡಿ.ಚೆನ್ನಮ್ಮ ಕಾಲೇಜಿನಲ್ಲಿ 2023- 24 ನೇ ಸಾಲಿನ ವಾರ್ಷಿಕ ಎನ್ ಎಸ್ ಎಸ್ ಶಿಬಿರದ ಪ್ರಯುಕ್ತ ಕಾನೂನು ಅರಿವು ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಮಡಿಕೇರಿಯ ಹಿರಿಯ ವಕೀಲ ರತನ್ ತಮ್ಮಯ್ಯ ಶಿಬಿರಾರ್ಥಿಗಳಿಗೆ ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣಾ ಕಾಯಿದೆ ಹಾಗೂ ಮೋಟಾರು ವಾಹನ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
ಸಂಸ್ಥೆಯ ಪ್ರಾಂಶುಪಾಲ ಸಿ.ಜಿ.ಮಂದಪ್ಪ, ಉಪನ್ಯಾಸಕರಾದ ಸವಿತ ಬಿ.ಕೆ, ಲಕ್ಷ್ಮಿ, ಶಿಬಿರಾಧಿಕಾರಿ ಎನ್.ಎನ್.ಮನೋಹರ್ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.










