ಮಡಿಕೇರಿ ಅ.29 : ಬೊಟ್ಟೋಳಂಡ ಮಿಟ್ಟು ಚೆಂಗಪ್ಪ ಹಾಗೂ ಬೊಟ್ಟೋಳಂಡ ವಾಸು ಮುತ್ತಪ್ಪ ಅವರ ಪ್ರಾಯೋಜಕತ್ವದಲ್ಲಿ ಬೊಟ್ಟೋಳಂಡ ಕಪ್ ರೇಸ್ ಮೈಸೂರು ರೇಸ್ ಕೋರ್ಸ್ನಲ್ಲಿ ನಡೆಯಿತು.
ವಿಜೇತರಿಗೆ ಮಿಟ್ಟು ಚೆಂಗಪ್ಪ ಅವರ ಪುತ್ರಿ ಕೃತಿ ಪ್ರದೀಪ್ ಹಾಗೂ ಅಳಿಯ, ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಸಿ.ಎಸ್.ಪ್ರದೀಪ್ ಅವರು ಬೊಟ್ಟೋಳಂಡ ಕಪ್ ನ್ನು ವಿತರಿಸಿದರು.
ಮೈಸೂರು ರೇಸ್ ಕ್ಲಬ್ ನ ಅಧ್ಯಕ್ಷ ಚಂದ್ರೇಗೌಡ, ಬೊಟ್ಟೋಳಂಡ ಅಪ್ಪಣ್ಣ, ಬೊಟ್ಟೋಳಂಡ ಪೊನ್ನಣ್ಣ, ಕವಿತಾ ಮುತ್ತಪ್ಪ, ಕ್ಲಬ್ ನ ಉಸ್ತುವಾರಿಗಳು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ತಮ್ಮ ಪ್ರಾಯೋಜಕತ್ವದಲ್ಲಿ ಕಳೆದ 20 ವರ್ಷಗಳಿಂದ ರೇಸ್ ನ್ನು ನಡೆಸಿಕೊಂಡು ಬರುತ್ತಿರುವುದಾಗಿ ಮಿಟ್ಟು ಚೆಂಗಪ್ಪ ತಿಳಿಸಿದರು.









