ಮಡಿಕೇರಿ ನ.4 : ಇಸ್ರೇಲ್ ಮತ್ತು ಪ್ಯಾಲೆಸ್ತೀನಿನ ನಡುವಿನ ಅಶಾಂತಿಯ ಶಮನಕ್ಕೆ ವಿಶ್ವಶಾಂತಿಯನ್ನು ಬಯಸುವ ಭಾರತ ಮಧ್ಯ ಪ್ರವೇಶ ಮಾಡಬೇಕು. ಆ ಮೂಲಕ ಕದನ ವಿರಾಮಕ್ಕೆ ಹಾದಿ ಸುಗಮಗೊಳಿಸುವ ಮರ‍್ಗೋಪಾಯಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸುನ್ನಿ ಮಹಲ್ ಒಕ್ಕೂಟದ ಕೊಡಗು ಜಿಲ್ಲಾ ಸಮಿತಿ ಮನವಿ ಮಾಡಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಸಮಿತಿಯ ಜಿಲ್ಲಾಧ್ಯಕ್ಷ ಸಿ.ಎಂ.ಅಬ್ದುಲ್ ಹಮೀದ್ ಮೌಲವಿ ಸುಂಟಿಕೊಪ್ಪ, ಇಸ್ರೇಲ್ ದಾಳಿಯಿಂದ ಸಾವಿರಾರು ಅಮಾಯಕ ಜೀವಗಳು ಬಲಿಯಾಗುತ್ತಿವೆ, ಅನೇಕರು ಗಾಯಾಳುಗಳಾಗಿ ನರಳುತ್ತಿದ್ದಾರೆ. ಆದ್ದರಿಂದ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಜೊತೆಯಲ್ಲಿ ಉತ್ತಮ ಬಾಂಧವ್ಯ ಹೊಂದಿರುವ ಭಾರತ ರ‍್ಕಾರ ಶಾಂತಿಯನ್ನು ಕಾಪಾಡಲು ಮರ‍್ಗರ‍್ಶನ ಮಾಡಬೇಕೆಂದು ತಿಳಿಸಿದ್ದಾರೆ.
ಎಲ್ಲಾ ರೀತಿಯ ದಾಳಿಗಳನ್ನು ತಕ್ಷಣ ನಿಲ್ಲಿಸಿ ಶಾಂತಿಯನ್ನು ಕಾಪಾಡಬೇಕು, ಅಮಾಯಕರ ಜೀವವನ್ನು ಉಳಿಸಬೇಕು. ಭಾರತ ರ‍್ಕಾರ ಮುಂದೆ ಬಂದು ಕದನ ವಿರಾಮ ಘೋಷಿಸುವಂತಹ ಕರ‍್ಯಕ್ಕೆ ಪ್ರಯತ್ನಿಸಬೇಕು. ಇಡೀ ಜಗತ್ತಿಗೇ ಮಾರಕವಾಗಿರುವ ಯುದ್ಧ ಯಾವುದಕ್ಕೂ ಪರಿಹಾರವಲ್ಲ, ಯುದ್ಧ ಮನುಕುಲದ ಮಾರಣಹೋಮಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಭಾರತ ಇಸ್ರೇಲ್ ನ ಮೇಲೆ ಪ್ರಭಾವ ಬೀರಿ ಕದನ ವಿರಾಮ ಘೋಷಣೆಯಾಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇತಿಹಾಸದಲ್ಲಿ ಇಲ್ಲಿಯವರೆಗೆ ಕಂಡು ಕೇಳರಿಯದ ರೀತಿಯಲ್ಲಿ ಗಾಜಾದಲ್ಲಿ ದಾಳಿಗಳು ನಡೆಯುತ್ತಿದ್ದು, ಇದೊಂದು ಅಮಾನುಷ ಮತ್ತು ಭಯಾನಕ ಕೃತ್ಯವಾಗಿದೆ. ಜನಾಂಗೀಯ ಹತ್ಯಾಕಾಂಡಗಳು ನಡೆಯುತ್ತಿದ್ದು, ಯುದ್ಧದ ಹೆಸರಿನಲ್ಲಿ ಆಸ್ಪತ್ರೆಗಳು, ನಿರಾಶ್ರಿತರ ಶಿಬಿರಗಳು, ಶಾಲೆಗಳು, ಆರಾಧನಾ ಕೇಂದ್ರಗಳು ಮತ್ತು ಜನವಸತಿ ಪ್ರದೇಶಗಳ ಮೇಲೆ ದಾಳಿಯಾಗುತ್ತಿದೆ. ಸಾವಿರಾರು ಪುಟಾಣಿ ಮಕ್ಕಳು, ಮಹಿಳೆಯರು, ವೃದ್ಧರು, ರೋಗಿಗಳು, ನಿರಾಶ್ರಿತರು ಜೀವ ಕಳೆದುಕೊಳ್ಳುತ್ತಿದ್ದಾರೆ. ಅನ್ನ, ಆಹಾರ, ನೀರು, ಆಸ್ಪತ್ರೆ, ಆಶ್ರಯಗವಿಲ್ಲದೆ ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ಇದು ಯುದ್ಧದಿಂದ ಉಂಟಾದ ಭೀಕರ ಪರಿಣಾಮವಾಗಿದ್ದು, ಇಡೀ ಮನುಕುಲವೇ ತಲೆತಗ್ಗಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ.
ಅಮಾಯಕರನ್ನು ರಕ್ಷಿಸಲು ಭಾರತ ರ‍್ಕಾರ ಮಧ್ಯ ಪ್ರವೇಶಿಸುವುದು ಅನಿವರ‍್ಯವಾಗಿದ್ದು, ಉಭಯ ಕಡೆಯವರ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗಬೇಕು. ಕದನ ವಿರಾಮಕ್ಕೆ ಪೂರಕ ವಾತಾವರಣವನ್ನು ಸೃಷ್ಟಿ ಮಾಡಿ ಸಮಸ್ಯೆಗಳನ್ನು ರ‍್ಚೆಯ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ವೇದಿಕೆ ಸೃಷ್ಟಿ ಮಾಡಬೇಕು ಎಂದು ಅಬ್ದುಲ್ ಹಮೀದ್ ಮೌಲವಿ ಕೋರಿದ್ದಾರೆ.
ವಿಶ್ವಶಾಂತಿಯನ್ನು ಬಯಸುವ ಭಾರತಕ್ಕೆ ಈ ಕಾರ್ಯ ಸಾಧ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.










