ಮಡಿಕೇರಿ ನ.10 : ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕವಿ, ಚಿಂತಕ ಅರ್ಜುನ್ ಮೌರ್ಯ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ದಲಿತ ಸಾಹಿತ್ಯ ಪರಿಷತ್ತು, ಗದಗ ಈ ಆದೇಶ ಪತ್ರವನ್ನು ಹೊರಡಿಸಿದೆ.
ಅರ್ಜುನ್ ಮೌರ್ಯ ಕೊಡಗಿನ ಕವಿ, ಬರಹಗಾರರಾಗಿದ್ದಾರೆ. ಅವನಿ, ಪಯಣ, ಕವರ, ದುಡಿ, ನಾನೂ ನನ್ನ ವ್ಯಾಖ್ಯಾನ, ಬೆಂದೊಡಲ ಕುಣಿತ, ಗುಡಿ, ತೆರೆದ ಅಂಚೆ ಕೃತಿಗಳು ಸೇರಿದಂತೆ ಒಂಭತ್ತು ಕೃತಿಗಳನ್ನು ರಚಿಸಿದ್ದಾರೆ. ಕಥಾಸಂಕಲನ, ಕವನ ಸಂಕಲನ, ಕಾದಂಬರಿ ಹಾಗೂ ಲೇಖನ ಬರಹದಲ್ಲಿ ತೊಡಗಿಸಿಕೊಂಡಿರುವ ಅರ್ಜುನ್ ಮೌರ್ಯ ಅವರಿಗೆ ಇತ್ತೀಚೆಗಷ್ಟೇ 2022ರ ” ಆಥರ್ ಆಫ್ ದ ಇಯರ್ ” ರಾಷ್ಟ್ರೀಯ ಪ್ರಶಸ್ತಿ ದೊರಕಿರುವುದು ವಿಶೇಷ.
ಬರಹಲೋಕದಲ್ಲಿ ಹೆಚ್ಚಾಗಿ ದಲಿತ ಬಂಡಾಯ ಸಾಹಿತ್ಯದಲ್ಲಿ ಗುರುತಿಸಿಕೊಂಡಿರುವ ಅವರು ಹಲವು ಸಂಘಟನೆಗಳೊಂದಿಗೆ ಸಮಾಜಸೇವೆಯಲ್ಲೂ ತನ್ನನ್ನು ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಖಾಸಗಿ ಪದವಿ ಕಾಲೇಜೊಂದರಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.








