ಕಡಂಗ ನ.10 : ನಾಪೋಕ್ಲು ಸಮೀಪದ ಕೊಟ್ಟಮುಡಿ ಮರ್ಕಝ್ ವಿದ್ಯಾ ಸಂಸ್ಥೆಯ ಅಧಿನದಲ್ಲಿ ಕಾರ್ಯಚರಿಸುವ ಮರ್ಕಝ್ ಪಬ್ಲಿಕ್ ಪ್ರೌಢ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ವಿಶೇಷ ಚೇತನ ಶಾಲೆಗೆ ಭೇಟಿದರು.
ಮರ್ಕಝ್ ಪ್ರೌಢ ಶಾಲೆಯ ಪ್ರಾಂಶುಪಾಲ ಹಾಗೂ ಆಡಳಿತ ಮಂಡಳಿಯ ಸಹಕಾರದೊಂದಿಗೆ ಕ್ಷೇತ್ರ ಭೇಟಿಯ ಅಂಗವಾಗಿ ಪಾಲಿಬೆಟ್ಟದ ‘ಚೆಷೈರ್ ಹೋಮ್ ಇಂಡಿಯಾ’ವಿಶೇಷ ವಿಕಲ ಚೇತನ ಭೇಟಿ ನೀಡಿದ ವಿದ್ಯಾರ್ಥಿಗಳು ಅಲ್ಲಿನ ವಿದ್ಯಾರ್ಥಿಗ ದೈನಂದಿನ ಚಟುವಟಿಕೆಗಳಲ್ಲಿ ಭಾಗಿಯಾದರು.
ಮರ್ಕಝ್ ವಿದ್ಯಾರ್ಥಿಗಳೆಲ್ಲರು ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಬೋಧನಾ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿದರು.
ಶಾಲೆಯ ಶಿಕ್ಷಕರಾದ ಉಸ್ಮಾನ್, ದೈಹಿಕ ಶಿಕ್ಷಕ ನಾಸಿರ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭ ಶಿಕ್ಷಕಿಯರಾದ ಆಶಾ, ರೆಹನಾ, ಗೀತಾ ಹಾಜರಿದ್ದರು.
ವರದಿ : ನೌಫಲ್ ಕಡಂಗ








