ಮಡಿಕೇರಿ ನ.27 : ಎನ್‍ಸಿಸಿ ದಿನಾರಣೆಯ ಪ್ರಯುಕ್ತ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್‍ಸಿಸಿಯ ವಿದ್ಯಾರ್ಥಿ ಕೆಡೆಟ್‍ಗಳು ಮಡಿಕೇರಿಯ ಐತಿಹಾಸಿಕ ಸ್ಮಾರಕ ತಾಣವಾದ ರಾಜರ ಗದ್ದುಗೆಯಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿದರು.
100ಕ್ಕೂ ಅಧಿಕ ವಿದ್ಯಾರ್ಥಿ ಕೆಡಟ್‍ಗಳು ಶುಚಿತ್ವ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಕೆಡೆಟ್‍ಗಳು ಗದ್ದುಗೆಯ ಆಸುಪಾಸಿನಲ್ಲಿದ್ದ ಪ್ಲಾಸ್ಟಿಕ್ ಮತ್ತು ತ್ಯಾಜ್ಯವನ್ನು ಸಂಗ್ರಹಿಸಿದರು. ಗದ್ದುಗೆಯ ಗೋಡೆಗಳನ್ನು ಸ್ವಚ್ಛಗೊಳಿಸಿದರು. ಈ ಚಟುವಟಿಕೆಯಲ್ಲಿ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರು ಹಾಗೂ ಎನ್ ಸಿ ಸಿ ಅಧಿಕಾರಿಗಳಾದ ಮೇಜರ್ ಪ್ರೊ. ರಾಘವ ಬಿ ಮತ್ತು ಹವಾಲ್ದಾರ್ ಮೇಜರ್ ರಾಮ್ ಬಹದ್ದೂರ್ ಥಾಪಾ ಮತ್ತು ಉಪನ್ಯಾಸಕಾದ ಪವನ್ ಕುಮಾರ್ ಮಾರ್ಗದರ್ಶನದಲ್ಲಿ ನಡೆಯಿತು.
ಪ್ರಾಂಶುಪಾಲರಾದ ಮೇಜರ್ ಪ್ರೊ. ರಾಘವ ಮಾತನಾಡಿ ರಾಜರ ಗದ್ದುಗೆಯ ವಿವರ, ವಾಸ್ತುಶಿಲ್ಪ ಮತ್ತು ಸೌಂದರ್ಯ ಮೀಮಾಂಸೆಯ ಕುರಿತು, ಸಮಾಜ ಸೇವೆಯಲ್ಲಿ ಎನ್ ಸಿ ಸಿ ಕೆಡೆಟ್ ಗಳ ಪಾತ್ರದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.













