ನಾಪೋಕ್ಲು ನ.27 : ಮಡಿಕೇರಿ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಮತ್ತು ಪರಿವರ್ತನಾ ಸಂಘ ಮೂರ್ನಾಡು ಶಾಖೆಯ ಪದಾಧಿಕಾರಿಗಳ ಚುನಾವಣೆಯು ಸಂಘದ ಸಭಾಂಗಣದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಪೆಬ್ಬಾಟಂಡ ಎ.ಪೆಮ್ಮಯ್ಯ, ಉಪಾಧ್ಯಕ್ಷರಾಗಿ ಮುಂಡಂಡ ಕೆ.ಕುಟ್ಟಪ್ಪ ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶಕರಾಗಿ ಪುದಿಯೋಕ್ಕಡ ಬೆಲ್ಲು ಸೋಮಯ್ಯ, ಕೆ.ಸುಭಾಷ್ ವಾಂಚಿರ, ಬಡುವಂಡ ಬೆಲ್ಲು ಚಿಣ್ಣಪ್ಪ, ಮೂಡೇರ ಅಶೋಕ ಅಯ್ಯಪ್ಪ, ಕೈಪೆಟ್ಟಿರ ಹರೀಶ್ ಅಯ್ಯಪ್ಪ, ಅವರೆಮಾದಂಡ ಸುಗುಣ ಸುಬ್ಬಯ್ಯ, ನೆರವಂಡ ಅನುಪ್ ಮುತ್ತಯ್ಯ, ನಾಯಕಂಡ ದೀಪು ಚಂಗಪ್ಪ, ಆಂಗೀರ ಸಂತೋಷ್ ಮಾದಪ್ಪ , ತೆಕ್ಕಡೆ ಶೋಭಾ ಮೋಹನ್, ಚಂಗಂಡ ಕನ್ನಿಕಾ ಸೂರಜ್ , ಎಂ.ಟಿ.ದೇವಪ್ಪ, ಹೆಚ್.ಎಸ್.ಗೋಪಾಲ್ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ಪಟ್ಟಡ ಮೋಹನ್, ಸಿಬ್ಬಂದಿಯವರು ಭಾಗವಹಿಸಿದ್ದರು.
ವರದಿ : ದುಗ್ಗಳ ಸದಾನಂದ












