ಮಡಿಕೇರಿ ನ.27 : ಮೈಸೂರಿನಲ್ಲಿ ನಡೆದ ಸೆಂಟ್ ಫಿಲೋಮಿನಾ(ಸ್ವಾಯತ್ತ)ಕಾಲೇಜಿನ 9ನೇ ಘಟಿಕೋತ್ಸವದಲ್ಲಿ ಕಂಡಂಗಾಲ ಗ್ರಾಮದ ಮುಲ್ಲೇಂಗಡ ಸಿಂಚನ ದೇಚಮ್ಮ ನಾಲ್ಕು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ. ಪದವಿಯನ್ನು ಪಡೆದಿರುವ ಇವರು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದಲ್ಲಿ ಅತಿ ಹೆಚ್ಚು ಅಂಕ ಗಳಿಸುವುದರೊಂದಿಗೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ನ್ಯಾಯಮೂರ್ತಿ ತಂಭುಚೆಟ್ಟಿ ಬಹುಮಾನವನ್ನೂ ಪಡೆದುಕೊಂಡಿದ್ದಾರೆ. ಇವರು ಮುಲ್ಲೇಂಗಡ ಸುರೇಶ್ ಭೀಮಯ್ಯ ಮತ್ತು ಕನಿಕೆ ದಂಪತಿಗಳ ಪುತ್ರಿ.









