ಮಡಿಕೇರಿ ನ.28 : ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲೊಂದಾದ ಪುತ್ತರಿ ಹಬ್ಬವನ್ನು ಮನೆಗೆ ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಮೂಲಕ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಜಿಲ್ಲೆಯಾದ್ಯಂತ ವಿವಿಧ ದೇವಾಲಯಗಳಲ್ಲಿ ಹಾಗೂ ಮನೆಗಳಲ್ಲಿ ನಿಗದಿತ ಸಮಯದಲ್ಲಿ ನೆರೆಕಟ್ಟಿ, ಕದಿರು ತೆಗೆದು ಪುತ್ತರಿ ಹಬ್ಬವನ್ನು ಸಂಭ್ರಮಿಸಿದರು.
ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಕದಿರು (ಪೈರು) ಕೊಯ್ಯುವ ಮೂಲಕ ಪುತ್ತರಿ ಹಬ್ಬಕ್ಕೆ ಚಾಲನೆ ನೀಡಲಾಯಿತು. ನೆರೆ ಕಟ್ಟುವ ಸಂಪ್ರದಾಯವನ್ನು ಅರ್ಚಕರು ಹಾಗೂ ತಕ್ಕ ಮುಖ್ಯಸ್ಥರು ನೆರವೇರಿಸಿದರು. ದೇವಾಲಯ ಆವರಣದ ಗದ್ದೆಯಲ್ಲಿ ಕದಿರು ಕೊಯ್ದು ಹಬ್ಬದ ವಿಧಿ ವಿಧಾನ ನಡೆಸಲಾಯಿತು.
ನಗರದ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯ ಹಾಗೂ ಕೊಡವ ಸಮಾಜದ ವತಿಯಿಂದ ದೇವಾಲಯದ ಗದ್ದೆಯಲ್ಲಿ ಭತ್ತದ ಕದಿರಿಗೆ ಪೂಜೆ ಸಲ್ಲಿಸಿ ಕದಿರು ಕೊಯ್ದು ವಿಶೇಷ ಪೂಜೆ ಸಲ್ಲಿಸಿ ನೆರದಿದ್ದವರಿಗೆ ಕದಿರು (ಪೈರು) ವಿತರಿಸಲಾಯಿತು.