ಕುಶಾಲನಗರ ನ.28 : ಕುಶಾಲನಗರ ಕೊಡವ ಸಮಾಜದ ಆಶ್ರಯದಲ್ಲಿ ಸಾಂಪ್ರದಾಯಿಕ ಪುತ್ತರಿ ನಮ್ಮೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕುಶಾಲನಗರ ಕೊಡವ ಸಮಾಜದ ಆವರಣದಲ್ಲಿ ಕೊಡವ ಸಮಾಜದ ಅಧ್ಯಕ್ಷ ಮಂಡೆಪಂಡ ಬೋಸ್ ಮೊಣ್ಣಪ್ಪ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇರಿದ ಸಮುದಾಯ ಬಾಂಧವರು ಮತ್ತು ಸಾರ್ವಜನಿಕರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಬಲ್ಲಾರಂಡ ಜಾಲಿ ತಮ್ಮಯ್ಯ ಅವರು ಗುತ್ತಿ ಪೂಜೆ ನೆರವೇರಿಸಿ ಆವರಣದ ಗದ್ದೆಗೆ ತೆರಳಿ ಸಾಂಪ್ರದಾಯಿಕವಾಗಿ ಕದಿರು ತೆಗೆದರು.
ನಂತರ ಸಮಾಜಕ್ಕೆ ಬಂದು ಕದಿರು ವಿತರಣೆ ನಡೆಯಿತು.
ಈ ಸಂದರ್ಭ ಸಮಾಜದ ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ, ಕಾರ್ಯದರ್ಶಿ ವಾಂಚೀರ ಮನು ನಂಜುಂಡ, ಖಜಾಂಚಿ ಬಲ್ಯಾಟಂಡ ಚಿಂಗಪ್ಪ, ಆಡಳಿತ ಮಂಡಳಿ ನಿರ್ದೇಶಕರು ಸದಸ್ಯರು ಸಾರ್ವಜನಿಕರು ಇದ್ದರು.









