ಮಡಿಕೇರಿ ನ.29 : ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಮಧ್ಯ ಪ್ರದೇಶದ ಭೂಪಾಲ್‍ನಲ್ಲಿ ನಡೆಯುತ್ತಿರುವ 66ನೇ ರಾಷ್ಟ್ರಮಟ್ಟದ ಶೂಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿನಿ ಕಾನಡ್ಕ ಧನ್ವಿ ಇಂಡಿಯನ್ ಶೂಟಿಂಗ್ ಟೀಮ್ ಟ್ರಯಲ್ಸ್ ಗೆ ಆಯ್ಕೆಯಾಗಿದ್ದಾಳೆ.
ಶೂಟಿಂಗ್ ಚಾಂಪಿಯನ್ ಶಿಪ್‍ನ 10 ಮೀ. ಏರ್ ಪಿಸ್ತೂಲ್ ಐಎಸ್‍ಎಸ್‍ಎಫ್ ಸ್ಪರ್ಧೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವ ಕಾನಡ್ಕ ಧನ್ವಿ ಯೂತ್ (19 ವರ್ಷದೊಳಗಿನವರು) ಹಾಗೂ ಜೂನಿಯರ್ (21 ವರ್ಷದೊಳಗಿನವರ) ವಿಭಾಗದಲ್ಲಿ ಇಂಡಿಯನ್ ಶೂಟಿಂಗ್ ಟೀಮ್ ಟ್ರಯಲ್ಸ್ ಗೆ ಆಯ್ಕೆಯಾಗಿದ್ದಾಳೆ.
ಈಕೆ ಮರಗೋಡಿನ ಕೃಷಿಕ ಕಾನಡ್ಕ ಹನೀಶ್ ಅಪ್ಪಾಜಿ ಹಾಗೂ ಆಶಾ ದಂಪತಿಯ ಪುತ್ರಿ.









