ಮೂರ್ನಾಡು ಡಿ.9 : ಚೇರಂಬಾಣೆ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಕರಾಟೆ ಪರೀಕ್ಷೆಯಲ್ಲಿ ಪದಕ ಮತ್ತು ವಿವಿಧ ಬೆಲ್ಟ್‍ಗಳನ್ನು ಪಡೆದುಕೊಂಡಿದ್ದಾರೆ.
ಅಂತರಾಷ್ಟ್ರೀಯ ಶಾವೊಲಿನ್ ಕುಂಗ್-ಫುಕರಾಟೆ ಶಾಲೆಯ ವತಿಯಿಂದ ನಡೆಸಲಾದ ಕರಾಟೆ ಪರೀಕ್ಷೆಯಲ್ಲಿ 47 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಈ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕ ಕುದುಪಜೆ ಕವನ್ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪದಕ ಮತ್ತು ವಿವಿಧ ರೀತಿಯ ಕರಾಟೆ ಬೆಲ್ಟ್‍ಗಳನ್ನು ವಿತರಿಸಿದರು.
ಅಂತರಾಷ್ಟ್ರೀಯ ಶಾವೊಲಿನ್ ಕುಂಗ್-ಫುಕರಾಟೆ ಶಾಲೆಯ ಭಾರತದ ಮುಖ್ಯತರಬೇತುದಾರ ದೇವರಾಜ್, ಕರ್ನಾಟಕ ತರಬೇತುದಾರ ಹಾಗೂ ರಾಜರಾಜೇಶ್ವರಿ ಪ್ರೌಢಶಾಲೆಯ ಕರಾಟೆ ಶಿಕ್ಷಕ ನಾಟೋಳಂಡ ನಂಜುಂಡ, ಕೊಡಗು ಜಿಲ್ಲಾ ತರಬೇತುದಾರರಾದ ವೇಣು ಮತ್ತು ಸತೀಶ್ ಹಾಜರಿದ್ದರು.









