ಮಡಿಕೇರಿ ಡಿ.9 : ಮೈಸೂರಿನ ಬ್ರಹ್ಮಾಕುಮಾರಿ ಯಾದವಗಿರಿ ಹಾಗೂ ಜಯಲಕ್ಷ್ಮಿಪುರಂ ಶಾಖೆಯಲ್ಲಿ ಒಂದು ವಾರ ಪ್ರಪುಲ್ಲಿತ ಮನಸ್ಸಿಗಾಗಿ ದಿವ್ಯ ಗುಣಗಳ ಧ್ಯಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಡಿಕೇರಿ ಶಾಖೆಯ ಬ್ರಹ್ಮಾಕುಮಾರಿ ಧನಲಕ್ಷ್ಮೀ ಅಕ್ಕನವರು ದಿವ್ಯ ಗುಣಗಳ ಕುರಿತು ಪ್ರವಚನ ನೀಡಿ, ಧ್ಯಾನದ ಮುಖಾಂತರ ಅನುಭವ ಮಾಡಿಸಿದರು.
ಈ ಸಂದರ್ಭ ಮೈಸೂರು ಉಪ ವಲಯದ ಹಿರಿಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀ ಜೀ ಹಾಗೂ ಶಾಖೆಯ ಸಹೋದರ, ಸಹೋದರಿಯರು ಧನಲಕ್ಷ್ಮೀ ಅಕ್ಕ ಅವರನ್ನು ಸನ್ಮಾನಿಸಿ, ಗೌರವಿಸಿದರು.








