ಮಡಿಕೇರಿ ಡಿ.13 : ವಿರಾಜಪೇಟೆ ತಾಲೂಕು ಅಮ್ಮತಿ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಕಣ್ಣಂಗಾಲ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ “ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ ಹಾಗೂ ಒಕ್ಕೂಟ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ನಂಜನಗೂಡು ಧಾರ್ಮಿಕ ಉಪನ್ಯಾಸಕ ಯೋಗಾನಂದ ಸ್ವಾಮಿ ಮಾತನಾಡಿ ನಮ್ಮ ಸಂಸ್ಕೃತಿ ಹಿರಿಮೆ ಹಾಗೂ ಧರ್ಮದ ಬಗ್ಗೆ ಉಪನ್ಯಾಸ ನೀಡಿದರು.
ಲೀಲಾವತಿ ಮಾತನಾಡಿ, ಗ್ರಾಮ ಅಭಿವೃದ್ಧಿ ಯೋಜನೆಯಿಂದ ನಡೆಸಲಾಗುವ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು, ಸುಜ್ಞಾನ ನಿಧಿ ಶಿಷ್ಯವೇತನ, ಜ್ಞಾನ ವಿಕಾಸ ಕಾರ್ಯಕ್ರಮಗಳು ವಿಮಾ ಕಾರ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಹೊಸದಾಗಿ ಜವಾಬ್ದಾರಿ ಪಡೆದುಕೊಂಡ ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು.
ಕಣ್ಣಂಗಾಲ ಸಾಮೂಹಿಕ ಸತ್ಯನಾರಾಯಣ ಪೂಜೆ ಸಮಿತಿ ಅಧ್ಯಕ್ಷರಾದ ಬಿ.ಎಸ್.ರೇಖಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಣ್ಣಂಗಾಲ ಗ್ರಾ.ಪಂ ಅಧ್ಯಕ್ಷ ಗ್ರೀಷ್ಮ ರಂಜನ್ ಕುಮಾರ್, ಹಚ್ಚಿನಾಡು ಪ್ರಗತಿಪರ ಕೃಷಿಕ ಬಿ.ಸಿ.ಮಂಜುನಾಥ್, ಒಂಟಿ ಅಂಗಡಿ ಕೃಷಿ ಪತ್ತಿನ ಸಹಕಾರ ಸಂಘ ಮಾಜಿ ಅಧ್ಯಕ್ಷ ಕೆ.ಪಿ.ನಾಗರಾಜು, ಒಂಟಿ ಅಂಗಡಿ ಕೆ.ಕೆ ಕನ್ಸ್ಟ್ರಕ್ಷನ್ ಮಾಲೀಕ ಸಿ.ಕೆ.ಶಿಜು, ಕಣ್ಣಂಗಾಲ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎಮ್.ಪಿ.ಚಿನ್ನಪ್ಪ ರಾಬಿನ್ , ಒಂಟಿ ಅಂಗಡಿ ಮುತ್ತಪ್ಪ ದೇವಸ್ಥಾನ ಅಧ್ಯಕ್ಷ ಅಚ್ಚುತ್ತನ್, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಬಿ.ಎನ್.ರಾಜೇಶ್ವರಿ, ವಿರಾಜಪೇಟೆ ತಾಲೂಕು ಯೋಜನಾಧಿಕಾರಿ ಬಿ.ದಿನೇಶ್, ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು , ಅಮ್ಮತಿ ವಲಯ ಪ್ರಗತಿ ಬಂಧು ಸ್ವ ಸಹಾಯ ಸಂಘದ ಪದಾಧಿಕಾರಿಗಳು, ಸದಸ್ಯರು ,ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಹಾಗೂ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಹಾಲ್ಗುಂದ, ಚೆಂಬೆಬೆಳ್ಳೂರು ಹಾಗೂ ಕಣ್ಣಂಗಾಲ ಒಕ್ಕೂಟಗಳ ಪದಗ್ರಹಣ ನಡೆಯಿತು. ಪ್ರಗತಿಪರ ಕೃಷಿಕರಾದ ಮಚ್ಚಾರಂಡ ದಮಯಂತಿ ಉತ್ತಪ್ಪ ನೂತನ ಪದಾಧಿಕಾರಿಗಳಿಗೆ ದಾಖಲಾತಿ ಸ್ಥಳಾಂತರ ಮಾಡಿದರು.
ಜಿ.ಪಂ ಮಾಜಿ ಸದಸ್ಯ ಶಶಿ ಸುಬ್ರಮಣಿ ಮಾತನಾಡಿ, ಗ್ರಾಮ ಅಭಿವೃದ್ಧಿ ಯೋಜನೆಯ ನವ ಜೀವನ ಸಮಿತಿ ಹಾಗೂ ಮಧ್ಯವರ್ಜನ ಶಿಬಿರಗಳ ಮಹತ್ವದ ಬಗ್ಗೆ ವಿವರಿಸಿದರು. ಜನಮಂಗಲ ಕಾರ್ಯಕ್ರಮದ ಅಡಿಯಲ್ಲಿ ಶ್ರೀ ಕ್ಷೇತ್ರದಿಂದ ಒದಗಿಸಿದ ವೀಲ್ ಚೇರ್ ಅನ್ನು ಫಲಾನುಭವಿಗೆ ವಿತರಣೆ ಮಾಡಿದರು.
ಕಾರ್ಯ ಕ್ರಮದಲ್ಲಿ ಗಣ್ಯರು ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಿದರು. ಕಾರ್ಯಕ್ರಮದ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸವಿತಾ ಸ್ವಾಗತಿಸಿದರು.
ಚೆಂಬೇಬೇಳೂರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ದೇವಕಿ ವಲಯದ ಪ್ರಗತಿ ವರದಿಯನ್ನು ವಾಚಿಸಿದರು. ವಲಯ ಮೇಲ್ವಿಚಾರಕ ಸುಜೀರ್ ಕುಲಾಲ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಪೂಜಾ ಸಮಿತಿ ಅಧ್ಯಕ್ಷ ಬಿ.ಎಸ್.ರೇಖಾ ವಂದಿಸಿದರು.