ಮಡಿಕೇರಿ ಡಿ.13 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದಲ್ಲಿ “ದಕ್ಷ ನಾಯಕತ್ವ ಮತ್ತು ಸಮರ್ಥ ವೃತ್ತಿಪರತೆಯಿಂದ ಮಾತ್ರವೇ ಸಹಕಾರ ಕ್ಷೇತ್ರ ಸದೃಡಗೊಳ್ಳಲು ಸಾಧ್ಯ” ಎಂಬ ವಿಷಯದ ಕುರಿತು ನಡೆದ ರಾಜ್ಯ ಮಟ್ಟದ ಅಂತರ್ ತರಬೇತಿ ಕೇಂದ್ರಗಳ ರೆಗ್ಯೂಲರ್ ಡಿಸಿಎಂ ಅಭ್ಯರ್ಥಿಗಳಿಗೆ ನಡೆದ ಚರ್ಚಾ ಸ್ಪರ್ಧೆಯಲ್ಲಿ ಕೆಐಸಿಎಂ ಮಡಿಕೇರಿ ತರಬೇತಿ ಕೇಂದ್ರ ದ್ವಿತೀಯ ಬಹುಮಾನ ಪಡೆದುಕೊಂಡಿದೆ.
ಸ್ಪರ್ಧೆಯಲ್ಲಿ ನಗರದ ಸಹಕಾರ ತರಬೇತಿ ಕೇಂದ್ರದ ವಿದ್ಯಾರ್ಥಿನಿಯಾದ ಸಹನಾ ಎನ್.ಪಿ ಹಾಗೂ ಜಸ್ಮಿತಾ ಪಿ.ಜಿ ಭಾಗವಹಿಸಿದ್ದು, ಪಿ.ಜಿ.ಜಸ್ಮಿತಾ ಗೆ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಶುಭಕೋರಿದ್ದಾರೆ ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ಡಾ.ರೇಣುಕಾ ಆರ್.ಎಸ್ ಹರ್ಷ ವ್ಯಕ್ತಪಡಿಸಿದ್ದಾರೆ.














