ಮಡಿಕೇರಿ ಡಿ.19 : ಗ್ರಾಮೀಣ ವಿದ್ಯಾಥಿ೯ಗಳಿಗೆ ಉನ್ನತ ಶಿಕ್ಷಣದ ಮಹತ್ವವನ್ನು ಪರಿಣಾಮಕಾರಿ ಮಾಗದಶ೯ನದೊಂದಿಗೆ ತಿಳಿಸಿದರೆ ಹಳ್ಳಿಯ ಮಕ್ಕಳೂ ಉನ್ನತ ಮಟ್ಟದ ಹುದ್ದೆಗಳನ್ನು ಪಡೆಯಲು ಸುಲಭಸಾಧ್ಯ ಎಂದು ಪಾಂಡಿಚೇರಿ ಸರ್ಕಾರದ ಆರೋಗ್ಯ ಮತ್ತು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಬಿ.ಆರ್.ಬಾಬು ಸಲಹೆ ನೀಡಿದ್ದಾರೆ.
ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಇದೇ ಸಂಸ್ಥೆಯ ಹಳೇ ವಿದ್ಯಾಥಿ೯ಯಾಗಿದ್ದ ಬಿ.ಆರ್.ಬಾಬು, ಗ್ರಾಮೀಣ ಸಂಸ್ಥೆಯಲ್ಲಿ ಓದುವ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸದ ಬಗ್ಗೆ ಅರಿವು ಮೂಡಿಸಿ ಸೂಕ್ತ ತರಬೇತಿಯನ್ನು ನೀಡಿದರೆ ಉನ್ನತ ಮಟ್ಟದ ಹುದ್ದೆಗಳನ್ನು ಪಡೆಯಬಹುದು ಎಂಬುದಕ್ಕೆ ತಾನೇ ಸಾಕ್ಷಿಯಾಗಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಕರ್ನಲ್ ಬಿ. ಜಿ. ವಿ .ಕುಮಾರ್ , ಡಿ.ಚೆನ್ನಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಾಧನೆ ಮಾಡಿ ಇದೇ ವೇದಿಕೆಗೆ ಅತಿಥಿಗಳಾಗಿ ಆಗಮಿಸಿದರೆ ಇದಕ್ಕಿಂತ ಸಾರ್ಥಕ್ಯ ಮತ್ತೊಂದಿಲ್ಲ ಎಂದರು.
ಬಾಬು ಅವರಿಗೆ ಡಿ. ಚೆನ್ನಮ್ಮ ಪ.ಪೂ.ಕಾಲೇಜಿನಲ್ಲಿ ಪಾಠ ಮಾಡಿದ್ದ ನಿವೃತ್ತ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಿಂದ ಗುರು ಶಿಷ್ಯ ರ ಸಮಾಗಮವು ಒಂದೇ ವೇದಿಕೆಯಲ್ಲಿ ನಡೆಯಿತು. ಈ ಸಂಸ್ಥೆಯ ವಿದ್ಯಾರ್ಥಿ ಕೆ.ಎ.ಎಸ್ ಅಧಿಕಾರಿಯಾಗಿ ನಿವೃತ್ತಿಗೊಂಡಿರುವ ಬಿ.ಎ. ನಾಣಿಯಪ್ಪ ಹಾಜರಿದ್ದು ಸಂಸ್ಥೆಯ ಬಗ್ಗೆ ಶ್ಲಾಘಿಸಿದರು. ವಾಷಿ೯ಕ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಂದ ಎನ್ ಸಿ ಸಿ ಪೆರೇಡ್, ಪಿರಮಿಡ್ , ಉಮ್ಮತ್ತಾಟ್ ಹಾಗೂ ಸಾಮೂಹಿಕ ಅಂಗ ಸಾಧನೆ ಪ್ರದಶಿ೯ತವಾದವು. ಪ್ರಾಂಶುಪಾಲರಾದ ಮಂದಪ್ಪ ಸಂಸ್ಥೆಯ ವರದಿ ವಾಚಿಸಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಮುದ್ದಪ್ಪ, ಮೋಹನ್ ಬೋಜಮ್ಮ ಹಿರಿಯ ದಾನಿ ಮರವಂಡ ಗಂಗಮ್ಮ ಗಣಪತಿ, ಮುಖ್ಯ ಶಿಕ್ಷಕಿ ರೇವತಿ ಉಪಸ್ಥಿತರಿದ್ದರು. ವಿದ್ಯಾಥಿ೯ಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಆಕಷ೯ಕವಾಗಿ ಜರುಗಿದವು.









