
ಮಡಿಕೇರಿ NEWS DESK ಫೆ.13 : ಬೆಂಗಳೂರಿನ ಪ್ರತಿಷ್ಠಿತ ಕೊಡಗು ಗೌಡ ಸಮಾಜದ ನೂತನ ಅಧ್ಯಕ್ಷರಾಗಿ ವಿಂಗ್ ಕಮಾಂಡರ್ (ನಿವೃತ್ತ) ಮನೋಜ್ ಕುಮಾರ್ ಅಯ್ಯೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ರತ್ನ ಉತ್ತಪ್ಪ ಚೆಟ್ಟಿಮಾಡ, ಮೋಹನ್ ಕುದುಪಜೆ, ಕಾರ್ಯದರ್ಶಿಯಾಗಿ ಬಿಪಿನ್ ಬೇಕಲ್, ಖಜಾಂಚಿಯಾಗಿ ಆಶಾ ಅರುಣ್ ಪಾರೆಮಜಲು, ಸಹ ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್ ಗೋವಿಂದಮ್ಮನ, ಸಹಾಯಕ ಕಾರ್ಯದರ್ಶಿಯಾಗಿ ವಿನಯ್ ಪೊನ್ನಪ್ಪ ಪೊಯ್ಯಕಂಡೀರ ಹಾಗೂ ಕಾನೂನು ಸಲಹೆಗಾರರಾಗಿ ಪ್ರಕಾಶ್ ನಿಡ್ಯಮಲೆ ಆಯ್ಕೆಯಾಗಿದ್ದಾರೆ ಎಂದು ಬೆಂಗಳೂರಿನ ಕೊಡಗು ಗೌಡ ಸಮಾಜದ ಪ್ರಕಟಣೆ ತಿಳಿಸಿದೆ.








