ನಾಪೋಕ್ಲು ಜ.3 : ಅಯೋದ್ಯೆಯ ಪವಿತ್ರ ಮಂತ್ರಾಕ್ಷತೆಯನ್ನು ಬಲಮುರಿಯ ಗ್ರಾಮದ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನದಲ್ಲಿ ಪೂಜಾ ವಿಧಿ ವಿಧಾನಗಳೊಂದಿಗೆ ಗ್ರಾಮದ ಪ್ರಮುಖರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಪಾರಣೆ ಗ್ರಾ.ಪಂ ಅಧ್ಯಕ್ಷ ಪಾಡೆಯಂಡ ಕಟ್ಟಿ ಕುಶಾಲಪ್ಪ, ಶಕ್ತಿಕೇಂದ್ರದ ಅಧ್ಯಕ್ಷ ಅಪ್ಪನೆರವಂಡ ರಾಜ, ಬಲಮುರಿ ಗ್ರಾ.ಪಂ ಸದಸ್ಯರಾದ ಬೊಳ್ಳಚೆಟ್ಟಿರ ಪ್ರಕಾಶ್ ಕಾಳಪ್ಪ, ಕಾರ್ಯಕರ್ತರಾದ ಆಂಗಿರ ಸಂತೋಷ್ ಮಾದಪ್ಪ, ಗುಡ್ಡೇರ ಲಕ್ಷು, ಬಿದ್ದಂಡ ಉಷಾದೇವಮ್ಮ, ಮಣಿಕಂಠ, ಬಿದ್ದಂಡ ಪ್ರಥ, ಕುಂದನ ದಯಾನಂದ ಸೇರಿದಂತೆ ಮುಖ್ಯ ಪಟ್ಟವರು ಹಾಜರಿದ್ದರು.
ಬಳಿಕ ಗ್ರಾಮದ ಮನೆ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರಿಗೆ ಪವಿತ್ರ ಮಂತ್ರಾಕ್ಷತೆಯನ್ನು ವಿತರಿಸಿ ಜ.22 ರಂದು ಅಯೋಧ್ಯೆಯಲ್ಲಿ ಶ್ರೀ ರಾಮನ ಮೂರ್ತಿಯ ಪ್ರತಿಷ್ಠಾಪನ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.
ವರದಿ : ದುಗ್ಗಳ ಸದಾನಂದ







