ಮಡಿಕೇರಿ ಜ.3 : ಕೊಡಗು ಜಿಲ್ಲಾ ಛಾಯಾಗ್ರಾಹಕರ ಸಂಘದ 2024ರ ಹೊಸ ಕ್ಯಾಲೆಂಡರ್ ಬಿಡುಗಡೆಗೊಂಡಿತು.
ನಗರದ ಖಾಸಗಿ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಬೋಸರಾಜು, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಮತ್ತು ಕೊಡಗಿನ ಜಿಲ್ಲಾಧಿಕಾರಿ ವೆಂಕಟರಾಜು, ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಎಸಿ ವಿಕಾಸ್ ಬಿಡುಗಡೆಗೊಳಿಸಿ, ಶುಭಹಾರೈಸಿದರು.
ಈ ಸಂದರ್ಭ ಕೊಡಗು ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಸ್.ಆರ್. ವಸಂತ್, ರಾಜ್ಯ ಸಂಘದ ನಿರ್ದೇಶಕರಾದ ದೀಪಕ್ ಕುಮಾರ್, ಗೌರವಾಧ್ಯಕ್ಷ ಸುರೇಶ್ ಮಾವಟ್ಕರ್, ಉಪಾಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸೋಲೋಮನ್ ಡೇವಿಡ್, ಸಹ ಕಾರ್ಯದರ್ಶಿ ರಂಜಿತ್, ಸಂಘಟನಾ ಕಾರ್ಯದರ್ಶಿ ಆವರ್ತಿ ಮಹದೇವಪ್ಪ, ಶ್ರೀ ಕಾವೇರಿ ಛಾಯಾಗ್ರಹಕರ ಸಂಘದ ಅಧ್ಯಕ್ಷ ವಿಜಯಕುಮಾರ್, ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ವಿನಯ್, ಜಿಲ್ಲಾ ನಿರ್ದೇಶಕರಾದ ಲವ, ಛಾಯಾಗ್ರಹಕರುಗಳಾದ ವಿನೋದ್, ಜಯರಾಮ್ ಮತ್ತು ಹೇಮಂತ್ ಹಾಜರಿದ್ದರು.








