ಸಿದ್ದಾಪುರ ಜ.5 : ಅಕ್ಷರ ಫೌಂಡೇಶನ್ ವತಿಯಿಂದ ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಬೆಟ್ಟದ ಕಾಡು ಹಾಗೂ ಕೆಪಿಎಸ್ ಶಾಲೆಯ 4, 5 ಹಾಗೂ 6ನೇ ತರಗತಿ ವಿದ್ಯಾರ್ಥಿಗಳಿಗೆ ಗ್ರಾ.ಪಂ ಮಟ್ಟದ ಗಣಿತ ಕಲಿಕಾ ಆಂದೋಲನ – ಗಣಿತ ಸ್ಪರ್ಧೆ ನಡೆಯಿತು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ.1,000 ನಗದು, ದ್ವಿತೀಯ ರೂ.600 ಹಾಗೂ ತೃತೀಯ ರೂ.400 ನಗದು ಮತ್ತು ಮೂವರಿಗೂ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
ಪರಿವೀಕ್ಷಕರಾಗಿ ಕಾರ್ಯನಿರ್ವಹಿಸಿದ ಬೆಟ್ಟದಕಾಡು ಶಾಲೆಯ ಶಿಕ್ಷಕರಾದ ಪುಷ್ಪವೇಣಿ, ಧನಲಕ್ಷ್ಮಿ ಹಾಗೂ ಕೆಪಿಎಸ್ ಶಾಲೆಯ ಪ್ರಾಥಮಿಕ ವಿಭಾಗದ ಶಿಕ್ಷಕರಾದ ಟಿ.ಎಸ್.ಸೌಮ್ಯ, ಕೆ.ಪ್ರಶಾಂತ್ ಭಕ್ತ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಗ್ರಾ.ಪಂ ಕಾರ್ಯದರ್ಶಿ ಪ್ರವೀಣ್, ಕೆಪಿಎಸ್ ಪ್ರಾಥಮಿಕ ವಿಭಾಗದ ಪ್ರಬಾರ ಮುಖ್ಯ ಶಿಕ್ಷಕಿ ಬಿ.ಭಾರತಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.









