ಮಡಿಕೇರಿ ಜ.8 : ದಕ್ಷಿಣ ಕೊಡಗಿನ ಪೊನ್ನಂಪೇಟೆಯ ಆಸ್ಟ್ರೋ ಟರ್ಫ್ ಮೈದಾನದಲ್ಲಿ ಆಯೋಜಿತ 67ನೇ ರಾಷ್ಟ್ರೀಯ ಮಟ್ಟದ 17 ವರ್ಷದೊಳಗಿನ ಬಾಲಕಿಯರ ಹಾಕಿ ಪಂದ್ಯಾವಳಿ ಪ್ರಶಸ್ತಿಯನ್ನು ಜಾರ್ಖಂಡ್ ತಂಡ ತನ್ನ ಮುಡಿಗೇರಿಸಿಕೊಂಡಿದೆ.
ಸೋಮವಾರ ಸಂಜೆ ನಡೆದ ಅಂತಿಮ ಪಮದ್ಯದಲ್ಲಿ ಜಾರ್ಖಂಡ್ ತಂಡ 7-1 ಗೋಲಗಳ ಭಾರೀ ಅಂತರದಿಂದ ಚಂಡೀಗಡ ತಂಡವನ್ನು ಪರಾಭವಗೊಳಿಸಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿತು. ಚಂಡೀಗಡ ತಂಡ ರನ್ನರ್ಸ್ ಅಪ್ ಪ್ರಶಸ್ತಿಗೆ ಭಾಜನವಾಯಿತು.
ಅಂತಿಮ ಪಂದ್ಯಕ್ಕೂ ಮುನ್ನ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ 1-0 ಅಂತರದಿಂದ ಮಣಿಪುರ ತಂಡವನ್ನು ಮಣಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡಿರು.
ಉದ್ಘಾಟನೆ-ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ. ವಿರಾಜಪೇಟೆ ತಾಲೂಕಿನ ಶಾಸಕರಾದ ಅಜ್ಜಿಕುಟ್ಟಿರ ಪೊನ್ನಣ್ಣ, ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜ್ ಅವರು ಹಾಕಿ ಸ್ಟಿಕ್‍ನಿಮದ ಚೆಂಡನ್ನು ತಳ್ಳುವ ಮೂಲಕ ಅಂತಿಮ ಪಂದ್ಯಕ್ಕೆ ಚಾಲನೆ ನೀಡಿ, ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು.










