ಮಡಿಕೇರಿ ಜ.12 : ಗ್ರಾಮೀಣ ಬದುಕು, ಆಚಾರ ವಿಚಾರ, ಸಂಸ್ಕೃತಿಗಳನ್ನು ಅನಾವರಣಗೊಳಿಸುವ ವೈಶಿಷ್ಟ್ಯಪೂರ್ಣವಾದ ‘ಗ್ರಾಮ ಸಿರಿ’ ಸಮಾರಂಭ ಜ.17 ಮತ್ತು 18 ರಂದು ಮಡಿಕೇರಿ ತಾಲ್ಲೂಕಿನ ಚೆಟ್ಟಿಮಾನಿಯಲ್ಲಿ ನಡೆಯಲಿದೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು ಕಸಾಪ, ಭಾಗಮಂಡಳಿ ಹೋಬಳಿ ಕಸಾಪ ಹಾಗೂ ಕುಂದಚೇರಿ, ಭಾಗಮಂಡಲ ಮತ್ತು ಅಯ್ಯಂಗೇರಿ ಗ್ರಾಮ ಪಂಚಾಯ್ತಿ ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ಗ್ರಾಮೀಣ ಸಂಸ್ಕೃತಿಯ ಸೊಬಗನ್ನು ಎರಡು ದಿನಗಳ ಕಾರ್ಯಕ್ರಮ ಪಸರಿಸಲಿದೆಯೆಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಚೆಟ್ಟಿಮಾನಿಯ ಶಾಲಾ ಮೈದಾನದಲ್ಲಿ ಆರಂಭಿಕ ದಿನವಾದ ಜ.17 ರಂದು ಬೆಳಗ್ಗೆ ರಸ್ತೆ ಓಟದ ಸ್ಪರ್ಧೆ ನಡೆಯಲಿದೆ. ಬಳಿಕ ಬೆಳಗ್ಗೆ 8.30 ಗಂಟೆಗೆ ಧ್ವಜಾರೋಹಣದ ಮೂಲಕ ಚೆಟ್ಟಿಮಾನಿಯ ಕಾಫಿ ಬೆಳೆಗಾರರಾದ ಮಂಗೇರಿರ ಕುಂಞಪ್ಪ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 4 ಗಂಟೆಗೆ ಭಾಗಮಂಡಲ ಹೋಬಳಿ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಶ್ರೀಧರ್ ಎ.ಎಸ್. ಅಧ್ಯಕ್ಷತೆಯಲ್ಲಿ ನಡೆಯಲಿದೆಯೆಂದು ಹೇಳಿದರು.
ಮೆರವಣಿಗೆ-ಪ್ರವೇಶ ದ್ವಾರಗಳ ಉದ್ಘಾಟನೆ :: ಗ್ರಾಮ ಸಿರಿಯ ದ್ವಿತೀಯ ದಿನವಾದ ಜ.18 ರಂದು ಬೆಳಗ್ಗೆ 8 ಗಂಟೆಯಿಂದ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, 9 ಗಂಟೆಗೆ ಭಾಗಮಂಡಲದ ಕಾವೇರಿ ಪದವಿ ಪೂರ್ವ ಕಾಲೇಜು ಮೈದಾನದಿಂದ ಚೆಟ್ಟಿಮಾನಿಯವರೆಗೆ ಆಕರ್ಷಕವಾದ ಸಾಂಸ್ಕೃತಿಕ ಮೆರವಣಿಗೆಯನ್ನು ಆಯೋಜಿತವಾಗಿದೆ.
ಮೆರವಣಿಗೆ ಸಾಗಿಬರುವ ಹಂತಗಳಲ್ಲೆ ಹೊಸೂರು ಜೋಯಪ್ಪ ನೆನಪಿನ ದ್ವಾರ, ಕಡೋಡಿ ಮಹಾವಿಷ್ಣು ದ್ವಾರ, ಸುಳ್ಯಕೋಡಿ ಮತ್ತು ಕುಂಬಳಚೇರಿ ಮುಖ್ಯದ್ವಾರ, ಎದುರ್ಕಳ ಶಂಕರನಾರಾಯಣ ಭಟ್ ಪುಸ್ತಕ ಮಳಿಗೆ, 1837 ರ ಸ್ವಾತಂತ್ರ್ಯ ಹೋರಾಟದ ಕೆದಂಬಾಡಿ ರಾಮಯ್ಯಗೌಡ ಸಭಾಮಂಟಪ, ಮೇಜರ್ ಮಂಗೇರಿರ ವಿನೋದ್ ಮುತ್ತಣ್ಣ ಮುಖ್ಯ ವೇದಿಕೆಗಳ ಉದ್ಘಾಟನೆ ನಡೆಯಲಿದೆಯೆಂದು ಮಾಹಿತಿಯನ್ನಿತ್ತರು.
ಗ್ರಾಮ ಸಿರಿ ಸಮಾರಂಭ :: ಗ್ರಾಮ ಸಿರಿ ವೇದಿಕೆ ಸಮಾರಂಭವನ್ನು ಬೆಳಗ್ಗೆ 10.30 ಗಂಟೆಗೆ ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಲಿದ್ದು, ‘ಗ್ರಾಮ ಸಿರಿ’ ಕಿರು ಹೊತ್ತಿಗೆಯನ್ನು ಸಂಸದ ಪ್ರತಾಪ ಸಿಂಹ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಹಲ ಗಣ್ಯರು ಪಾಲ್ಗೊಳ್ಳಲಿದ್ದಾರೆಂದರು.
ವಿಚಾರಗೋಷ್ಠಿಗಳು :: ಮಧ್ಯಾಹ್ನ 12.30 ಕ್ಕೆ ‘ಗ್ರಾಮೀಣ ಜನರ ಸಮಸ್ಯೆಗಳು’ ವಿಷಯದ ಕುರಿತ ಮೊದಲ ವಿಚಾರ ಗೋಷ್ಠಿ ಮತ್ತು ಮಧ್ಯಾಹ್ನ 2.30ಕ್ಕೆ ಗ್ರಾಮೀಣ ಜನರ ಬದುಕು ಸಂಸ್ಕೃತಿ ಮತ್ತು ಜಾನಪದ ವಿಷಯದ ದ್ವಿತೀಯ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ. ಇವುಗಳ ನಡುವೆ ಸ್ಥಳೀಯ ಕಲಾವಿದರಿಂದ ಕನ್ನಡ ಗೀತ ಗಾಯನ ನಡೆಯಲಿದೆಯೆಂದರು.
21 ಮಂದಿ ಸಾಧಕರಿಗೆ ಸನ್ಮಾನ :: ಗ್ರಾಮ ಸಿರಿಯ ಭಾಗವಾಗಿ ಸಂಜೆ 4 ಗಂಟೆಗೆ ವಿವಿಧ ಕ್ಷೇತ್ರಗಳ 21 ಮಂದಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆಂದು ರಮೇಶ್ ತಿಳಿಸಿದರು.
ಸಮಾರೋಪ ಸಮಾರಂಭ ಸಂಜೆ 4.30 ಗಂಟೆಗೆ ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನಂತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆಯೆಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್, ಚೆಟ್ಟಿಮಾನಿ ಗ್ರಾಪಂ ಅಧ್ಯಕ್ಷರಾದ ಪೊಡನೋಳನ ದಿನೇಶ್, ಭಾಗಮಂಡಲ ಹೋಬಳಿ ಕಸಾಪ ಅಧ್ಯಕ್ಷ ಸುನಿಲ್ ಪತ್ರಾವೋ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಹಾಗೂ ಸಂಚಾಲಕ ಮಧು ಚೆಟ್ಟಿಮಾನಿ ಉಪಸ್ಥಿತರಿದ್ದರು.
Breaking News
- *ಗುಂಡು ಎಸೆತ : ಕರ್ನಾಟಕವನ್ನು ಪ್ರತಿನಿಧಿಸಿದ ಕಾವೇರಿ ಶಾಲೆ ವಿದ್ಯಾರ್ಥಿನಿ ಪಿ.ಶಿಪ್ರಾ ಕಾಳಪ್ಪ*
- *ಅಮ್ಮತ್ತಿ- ಪಾಲಿಬೆಟ್ಟ ರಸ್ತೆ ಅವ್ಯವಸ್ಥೆ : ಆಟೋ ಚಾಲಕರಿಂದ ಪ್ರತಿಭಟನೆ*
- *ನಾಪೋಕ್ಲುವಿನಲ್ಲಿ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆ : ಸರ್ವ ಸದಸ್ಯರು ಒಗ್ಗೂಡಿದರೆ ಮಾತ್ರ ಸಂಘದ ಬೆಳವಣಿಗೆ ಸಾಧ್ಯ : ನಾಣಯ್ಯ*
- *ವಿರಾಜಪೇಟೆಯಲ್ಲಿ ಸಂವಿಧಾನ ಜಾಗೃತಿ ಜಾಥಾ*
- *ಹೊಸಕೋಟೆ ಗ್ರಾಮದಲ್ಲಿ ಕಾಡಾನೆ ಹಿಂಡು ದಾಳಿ : ಬೆಳೆನಾಶ : ಸೂಕ್ತ ಕ್ರಮಕ್ಕೆ ಬೆಳೆಗಾರರ ಆಗ್ರಹ*
- *ಸೋಮವಾರಪೇಟೆ ಸಂತಜೋಸೆಫರ ಪದವಿ ಕಾಲೇಜಿನಲ್ಲಿ ಸಂವಿಧಾನ ಪೀಠಿಕೆ ವಾಚನ*
- *ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿಯಲ್ಲಿ ಸಂವಿಧಾನ ದಿನ ಆಚರಣೆ*
- *ತೋಳೂರುಶೆಟ್ಟಳ್ಳಿ : ಡಾ. ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಸಂವಿಧಾನ ದಿನಾಚರಣೆ*
- *ಸೋಮವಾರಪೇಟೆ ಗ್ಯಾರೆಂಟಿ ಯೋಜನೆಯ ಮಾಸಿಕ ಸಭೆ*
- *ಬೆಳೆ ಸಮೀಕ್ಷೆ ಕಾರ್ಯ : ಆಕ್ಷೇಪಣೆ ಸಲ್ಲಿಸಲು ನ.30 ಕೊನೆ ದಿನ*