ಮಡಿಕೇರಿ ಜ.14 : ಸೋಮವಾರಪೇಟೆ ಪುಷ್ಪಗಿರಿ ಜೇಸೀ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಎಸ್.ಆರ್.ವಸಂತ್ ಅವರನ್ನು ಸನ್ಮಾನಿಸಲಾಯಿತು.
ಸಂಕಪ್ಪ ಸಭಾಂಗಣದಲ್ಲಿ ನಡೆದ ಜೇಸೀ ಪದಗ್ರಹಣ ಸಮಾರಂಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಲೋಮನ್ ಡೇವಿಡ್, ನಿಕಟಪೂರ್ವ ಅಧ್ಯಕ್ಷ ಸುರೇಶ್ ಮಾವುಟ್ಕರ್, ಕುಶಾಲನಗ ಶ್ರೀ ಕಾವೇರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ವಿಜುಕುಮಾರ್, ದಕ್ಷಿಣ ಕೊಡಗು ಛಾಯಾಗ್ರಹಕರ ಸಂಘದ ಮಾಜೀ ಅಧ್ಯಕ್ಷ ರವೀಂದ್ರ ರೈ, ಸೋಮವಾರಪೇಟೆ ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ವಿನಯ್‌ಕುಮಾರ್ ಸೇರಿದಂತೆ ಇತರರು ವಸಂತ್ ಅವರನ್ನು ಸನ್ಮಾನಿಸಿದರು. ಜೇಸಿ ನಿಕಟಪೂರ್ವ ಅಧ್ಯಕ್ಷೆ ಎಂ.ಎ.ರುಬೀನಾ ಉಪಸ್ಥಿತರಿದ್ದರು.










