ಮಡಿಕೇರಿ ಜ.14 : ಬೆಂಗಳೂರಿನ ಕೊಡಗು ಗೌಡ ಸಮಾಜದಲ್ಲಿ ಬೆಂಗಳೂರಿನ ಎಲ್ಲಾ ಗೌಡ ಸಮಾಜ ಮತ್ತು ಒಕ್ಕಲಿಗ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆ ಜ.14 ರಂದು ನಡೆಯಿತು.
ಕೊಡಗಿನಲ್ಲಿ ನಡೆಯುತ್ತಿರುವ ಕೊಡವ ಲ್ಯಾಂಡ್ ಬೇಡಿಕೆ ಹಾಗೂ ಡಾ.ಸುಬ್ರಮಣ್ಯಂ ಸ್ವಾಮಿ ಅವರು ಕೊಡವರ ಪರವಾಗಿ ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಹೂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮತ್ತು ಕೊಡವರನ್ನು ಪರಿಶಿಷ್ಟ ಜಾತಿ ಎಂದು ಪರಿಗಣಿಸಬೇಕೆನ್ನುವ ಒತ್ತಾಯವಿರುವ ಬಗ್ಗೆ ಸಮಗ್ರ ಚರ್ಚೆ ನಡೆಯಿತು.
ಕೊಡಗಿನಲ್ಲಿ ಶೇ.80 ರಿಂದ 90 ರಷ್ಟು ಮಂದಿ ಗೌಡರು, ಒಕ್ಕಲಿಗರು, ಹಿಂದುಳಿದ ವರ್ಗದವರು ಹಾಗೂ ಇತರೆ ಜನಾಂಗದವರು ವಾಸಿಸುತ್ತಿದ್ದಾರೆ. ಕೇವಲ ಅಲ್ಪಸಂಖ್ಯಾತ ವರ್ಗಕ್ಕೆ ಪ್ರತ್ಯೇಕ ರಾಜ್ಯ ಅಥವಾ ಸ್ವಾಯತ್ತತೆ ನೀಡುವುದು ಎಷ್ಟು ಸಮಂಜಸ ಎಂದು ಸಮಾಲೋಚಿಸಲಾಯಿತು.
ಸರಕಾರ ಇಂತಹ ಬೇಡಿಕೆಗಳಿಗೆ ಮಣಿದರೆ, ಜನಾಂಗೀಯ ಸಂಘರ್ಷಕ್ಕೆ ಒಳಗಾಗುವ ಪರಿಸ್ಥಿತಿ ಉದ್ಭವವಾಗಬಹುದು ಎಂದು ಸಭೆ ಆತಂಕ ವ್ಯಕ್ತಪಡಿಸಿತು. ಹಾಗಾಗಿ ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ನಾವೆಲ್ಲರೂ ರಾಷ್ಟ್ರದ ಐಕ್ಯತೆಗಾಗಿ, ಸಂವಿಧಾನದ ಮೂಲಭೂತ ತತ್ವಗಳಿಗೆ ಧಕ್ಕೆಯಾಗದ ರೀತಿಯಲ್ಲಿ ನಮ್ಮೆಲ್ಲರ ಅಸ್ತಿತ್ವದ ಉಳಿವಿಗಾಗಿ ರಾಜಕೀಯ, ಸಾಮಾಜಿಕ ಮತ್ತು ಕಾನೂನಾತ್ಮಕವಾಗಿ ಹೋರಾಡಬೇಕಾಗಿದೆ ಎಂದು ಸಭೆ ನಿರ್ಧರಿಸಿತು.
ಕರ್ನಾಟಕ ರಾಜ್ಯ ಒಕ್ಕಲಿಗರ ಜನಜಾಗೃತಿ ವೇದಿಕೆಯ ಅಧ್ಯಕ್ಷ ಕೆ.ಎನ್.ಲಿಂಗೇಗೌಡ, ಒಕ್ಕಲಿಗರ ಸಂಘ ಹಾಗೂ ಕಾರ್ಮಿಕ ಹೋರಾಟ ಸಮಿತಿಯ ಅಧ್ಯಕ್ಷ ಗೋವಿಂದೇಗೌಡ, ಒಕ್ಕಲಿಗರ ಕ್ರಿಯಾ ಸಮಿತಿಯ ಅಧ್ಯಕ್ಷ ಕುಮಾರ್, ರಾಜ್ಯ ಒಕ್ಕಲಿಗರ ಮಹಾಸಭಾದ ಅಧ್ಯಕ್ಷ ದೇವರಾಜ್, ಒಕ್ಕಲಿಗರ ಸಂಘ ಉಳ್ಳಾಲದ ಅಧ್ಯಕ್ಷ ಬೆಟ್ಟಸ್ವಾಮಿ, ಒಕ್ಕಲಿಗರ ಡೈರೆಕ್ಟ್ ಸಂಸ್ಥೆಯ ಅಧ್ಯಕ್ಷ ಕೆ.ಟಿ.ಚಂದ್ರು, ಆದಿವಾಸಿ ಜನಾಂಗ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಗುರುಶಾಂತ್, ಬೆಂಗಳೂರಿನ ಕೊಡಗು ಗೌಡ ಸಮಾಜದ ಅಧ್ಯಕ್ಷ ಕೇಕಡ ನಾಣಯ್ಯ, ಬೆಂಗಳೂರಿನ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಪಳಂಗಪ್ಪ, ದಾಸರಹಳ್ಳಿ ಕೊಡಗು ಗೌಡ ಸಮಾಜದ ಅಧ್ಯಕ್ಷ ಕತ್ರಿಕೊಲ್ಲಿ ದೇವಯ್ಯ, ಯಲಹಂಕದ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಅಧ್ಯಕ್ಷ ಅಜಿತ್ ಕುಮಾರ್ ಕುನ್ಯಾಳಿ, ಕೊಡಗು ಗೌಡ ಸಮಾಜಗಳ ಒಕ್ಕೂಟದ ನಿರ್ದೇಶಕರಾದ ತೇನನ ರಾಜೇಶ್, ಕುದುಪಜೆ ಮೋಹನ್, ಬೆಂಗಳೂರಿನ ಕೊಡಗು ಗೌಡ ಸಮಾಜ ಯುವ ವೇದಿಕೆಯ ಅಧ್ಯಕ್ಷರಾದ ತಳೂರು ಮಮತಾ, ಬೆಂಗಳೂರಿನ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಯುವ ವೇದಿಕೆಯ ಅಧ್ಯಕ್ಷ ದಯಾನಂದ ಕುಂಬ್ಲಾಡಿ, ಹಿರಿಯ ವಕೀಲರಾದ ನಿಡ್ಯಮಲೆ ಪ್ರಕಾಶ್ ಹಾಗೂ ಎಲ್ಲಾ ಗೌಡ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Breaking News
- *ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಲರವ*
- *ಕಬ್ಬಚ್ಚಿರ ರಶ್ಮಿ ಕಾರ್ಯಪ್ಪಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ*
- *ಬೋಯಿಕೆರಿ ಅಂಗನವಾಡಿಯಲ್ಲಿ ನಿವೃತ್ತ ಕಾರ್ಯಕರ್ತೆಯರಿಗೆ ಬೀಳ್ಕೊಡುಗೆ : ಸಂಸ್ಕಾರವಂತ ಸಮಾಜ ನಿರ್ಮಾಣದ ರೂವಾರಿಗಳು ಅಂಗನವಾಡಿ ತಾಯಂದಿರು : ತೆನ್ನಿರ ಮೈನಾ ಶ್ಲಾಘನೆ*
- *ವ್ಯಾoಡಮ್ ಎಂಟರ್ಪ್ರೈಸಸ್ ನ ವಾರ್ಷಿಕೋತ್ಸವ : ನ.24 ರಂದು ಲಕ್ಕಿ ಡ್ರಾ ಸಮಾರಂಭ*
- *ಮಾದರಿ ವಿಶೇಷಚೇತನರ ಸ್ವ ಸಹಾಯ ಸಂಘ ಹಾಗೂ ಮಾದರಿ ಗ್ರಾಮ/ ಪಟ್ಟಣ ಪಂಚಾಯತ್ ಪ್ರಶಸ್ತಿಗೆ ಅರ್ಜಿ ಆಹ್ವಾನ*
- *ಹೊಸ್ಕೇರಿಬೆಟ್ಟ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ*
- *ಕೊಡಗು : ಸಹಕಾರ ಸಂಘಗಳ ಸುಸ್ಥಿರತೆಗೆ ಎಲ್ಲರೂ ಶ್ರಮಿಸಿ : ಕೆ.ಎನ್.ರಾಜಣ್ಣ ಸಲಹೆ*
- *ಮಡಿಕೇರಿಯಲ್ಲಿ ಪೌರಕಾರ್ಮಿಕರ ದಿನಾಚರಣೆ : ಪೌರಕಾರ್ಮಿಕರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ : ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*