ಮಡಿಕೇರಿ ಜ.16 : ತಮಿಳು ಭಾಷೆಯ ಪ್ರಾಚೀನ ಕವಿ ತಿರುವಳ್ಳುವರ್ ಅವರ ತಿರುಕ್ಕುರಳ್ ಕೃತಿಯ ಕೊಡವ ಅನುವಾದ ಕೃತಿಯು ಇತ್ತೀಚೆಗೆ ಜರುಗಿದ ‘ಕಾಶಿ ತಮಿಳ್ ಸಂಗಮಂ’ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಂದ ಬಿಡುಗಡೆಗೊಂಡಿತು.
ತಮಿಳು ಭಾಷೆಯಲ್ಲಿದ ಈ ಕೃತಿಯನ್ನು ಕೊಡವ ಭಾಷೆಗೆ ಗೋಣಿಕೊಪ್ಪ ಕಾವೇರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಅನುವಾದ ಮಾಡಿದ್ದರು.









