ಕಡಂಗ ಜ.16 : ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಮತ್ತು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಕಡಂಗ ಪಟ್ಟಣದಲ್ಲಿ ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತಾ ಸಪ್ತಾಹ ನಡೆಯಿತು.
ಈ ಸಂದರ್ಭ ವಿರಾಜಪೇಟೆ ಠಾಣಾಧಿಕಾರಿ ವಾಣಿ ಶ್ರೀ ಮಾತನಾಡಿ, ವಾಹನ ಸವಾರರು ತಮ್ಮ ತಮ್ಮ ವಾಹನಗಳ ಎಲ್ಲಾ ರೀತಿಯ ದಾಖಲೆಗಳು ಸ್ಪಷ್ಟವಾಗಿ ಇಟ್ಟುಕೊಳ್ಳಿ, ಇನ್ಸೂರೆನ್ಸ್ ಮತ್ತು ಆರ್ ಸಿ ಬುಕ್ ಗಳು ಕಡ್ಡಾಯವಾಗಿ ಸರಿಪಡಿಸಿಕೊಳ್ಳಬೇಕು, ಬೈಕ್ ಸವಾರರು ಹೆಲ್ಮೆಟ್ ಮತ್ತು ಕಾರು ಚಾಲಕರು ವಾಹನದ ಬೆಲ್ಟ್‍ನ್ನು ಕಡ್ಡಾಯವಾಗಿ ಧರಿಸಿ ವಾಹನ ಸಂಚಾರ ಮಾಡುವ ಮೂಲಕ ಎಲ್ಲಾ ರೀತಿಯ ಸಂಚಾರ ನಿಯಮಗಳನ್ನು ಪಾಲಿಸಬೇಕೆಂದು ಸಲಹೆ ನೀಡಿದರು.
18 ವರ್ಷದೊಳಿಗೆ ವಿದ್ಯಾರ್ಥಿಗಳಿಗೆ ಪೋಷಕರು ವಾಹನವನ್ನು ನೀಡದಂತೆ ತಿಳಿಸಿದ ಅವರು, ದ್ವಿಚಕ್ರ ವಾಹನದಲ್ಲಿ ಮೂವರನ್ನು ಕುಳಿತುಕೊಂಡು ಸಂಚಾರ ಮಾಡುತ್ತಿರುವುದು ಕಂಡು ಬಂದರೆ ಪೋಷಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಠಾಣಾ ಸಿಬ್ಬಂದಿಗಳಾದ ಕಿರಣ್ ಕುಮಾರ್, ಸಂದೀಪ್ ಸರ್ಮೂರ್ತಿ, ಅನಿತಾ ಮತ್ತು ಮಹಿಳಾ ಅಧಿಕಾರಿಗಳು, ಪ್ರಮುಖರಾದ ಸೌಕತ್, ರಜಾಕ್ ಬೋಪಣ್ಣ, ತಮ್ಮು, ಜಲಾಲ್ ಜುನೈದ್, ನವೀನ ಮತ್ತು ಗ್ರಾಮಸ್ಥರು ಆಟೋ ಚಾಲಕರು ಹೆಚ್ಚಿನ ಸಂಖ್ಯೆ ಪಾಲ್ಗೊಂಡಿದ್ದರು.
ವರದಿ : ನೌಫಲ್ ಕಡಂಗ