ವಿರಾಜಪೇಟೆ ಜ.26 NEWS DESK : ವಿರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ 75ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಐಸಾಕ್ ರತ್ನಾಕರ್ ದ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು.
ಗಣರಾಜ್ಯೋತ್ಸವದ ಸಂದೇಶ ನೀಡಿದ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರೆ. ಫಾ. ಮದಲೈ ಮುತ್ತು ಮಾತನಾಡಿ, ನಮ್ಮ ಸಂವಿಧಾನವು ನಮ್ಮ ಹೆಮ್ಮೆಯಾಗಿದ್ದು, ಅದನ್ನು ವಿವಿಧ ರಾಷ್ಟ್ರಗಳ ಅಲಿಖಿತ ಸಂವಿಧಾನವನ್ನು ಪರಿಶೀಲಿಸಿ ರಚಿಸಲಾಗಿದೆ. ಭಾರತವು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವೂ ಆಗಿದೆ. ಸಂವಿಧಾನದ ಆಶಯವನ್ನು ಪ್ರತಿಯೊಬ್ಬರು ಗೌರವಿಸಬೇಕು. ವೈವಿಧ್ಯತೆಯಲ್ಲಿ ಏಕತೆಯನ್ನು ಮೂಡಿಸಬೇಕು ಎಂದರು.
ಪ್ರಸ್ತುತದಲ್ಲಿ ಇರುವ ಜಾತೀಯತೆ, ಮತಾಂಧತೆ ಮುಂತಾದವು ಆತಂಕಕಾರಿಯಾಗಿದ್ದು, ನಾವೆಲ್ಲರೂ ಸಮಾನರು ಎಂಬ ತತ್ವ ಪಾಲಿಸಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪದವಿ ಪ್ರಾಂಶುಪಾಲೆ ತೃಪ್ತಿ, ಮುಖ್ಯೋಪಾಧ್ಯಾಯರಾದ ಬೆನ್ನಿ ಜೋಸೆಫ್, ಸಿಸ್ಟರ್ ರೋಸಿ, ಸಿಸ್ಟರ್ ಐಡಾ, ಉಪನ್ಯಾಸಕರು ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಕ್ಷಕ ಗಂಗಾಧರ್ ನಿರೂಪಿಸಿ, ಉಪನ್ಯಾಸಕಿ ಅಶ್ವಿನಿ ಸ್ವಾಗತಿಸಿ, ಶಿಕ್ಷಕಿ ದಿವ್ಯ ವಂದಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.










