ಮಡಿಕೇರಿ ಜ.27 NEWS DESK: ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧವಾದ, ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಕೊಡಗು ಜಿಲ್ಲೆಯ 6 ಕೊಡವ ಪದ್ಮ ಪುರಸ್ಕೃತರು ಕೊಡಗಿಗೆ ಹಾಗೂ ಕೊಡವರಿಗೆ ಹೆಮ್ಮೆಯ ವಿಷಯ. ಇವರ ಹೆಸರುಗಳು ಕೊಡಗಿನ ಚರಿತ್ರೆಯಲ್ಲಿ ಬಂಗಾರದ ಅಕ್ಷರದಲ್ಲಿ ಬರೆಯಲ್ಪಡುತ್ತದೆ.
ಈ ವರ್ಷ ವಿಶ್ವದ ನಂಬರ್.1 ಟೆನ್ನಿಸ್ ಆಟಗಾರ ಮಚಂಡ ರೋಹನ್ ಬೋಪಣ್ಣ ಹಾಗೂ ಸ್ಕ್ವಾಶ್ ಆಟಗಾರ್ತಿ ಕುಟ್ಟಂಡ ಜೋಶ್ನ ಚಿಣ್ಣಪ್ಪ ಅವರಿಗೆ ಪದ್ಮಶ್ರೀ ಲಭ್ಯವಾಗಿದೆ. ಇದು ಕ್ರೀಡಾ ಲೋಕಕ್ಕೂ ಹಾಗೂ ಕೊಡಗಿಗೂ ಗೌರವ ತರುವಂತಹ ವಿಷಯ.
ಈಗಾಗಲೇ ಹಾಕಿ ದಿಗ್ಗಜ ಡಾ.ಮೊಳ್ಳೇರ.ಪಿ.ಗಣೇಶ್ ಹಾಗೂ ಉಮ್ಮತ್ತಾಟ್ ನಲ್ಲಿ ಐಮುಡಿಯಂಡ ರಾಣಿ ಮಾಚಯ್ಯ ಅವರಿಗೆ ಪದ್ಮಶ್ರೀ ಲಭ್ಯವಾಗಿದೆ.
ಸೈನ್ಯದಲ್ಲಿ ಜನರಲ್ ಕೊಡಂದೇರ.ಎಸ್.ತಿಮ್ಮಯ್ಯ ಅವರಿಗೆ ಪದ್ಮಭೂಷಣ, ಶಿಕ್ಷಣ ಹಾಗೂ ಸಮಾಜಸೇವೆ ಕ್ಷೇತ್ರದಲ್ಲಿ ಕೋದಂಡ ರೋಹಿಣಿ ಅವರಿಗೆ ಪದ್ಮಶ್ರೀ ನೀಡಲಾಗಿದೆ. ಇದನ್ನು ಇಲ್ಲಿ ಸ್ಮರಿಸಬಹುದು.
ಭಾರತದ ಅತೀ ಉನ್ನತ ನಾಗರೀಕ ಪ್ರಶಸ್ತಿ ಕೊಡಗಿನವರಿಗೆ ಲಭಿಸಿದ್ದು, ಕೊಡಗಿನ ಎಲ್ಲರಿಗೂ ಸಂತಸ ತಂದಿದೆ. ಹೀಗೆ ಈ ಪ್ರಶಸ್ತಿಗಳು ಕೊಡಗಿನವರಿಗೆ ಮುಂದೆಯೂ ಲಭ್ಯವಾಗಲಿ ಎಂದು ಆಶಿಸುತ್ತೇನೆ. (ಚೆಪ್ಪುಡೀರ ಕಾರ್ಯಪ್ಪ)











