ಮಡಿಕೇರಿ ಜ.28 : ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಷನ್ ನ ಸೋಮವಾರಪೇಟೆ ತಾಲ್ಲೂಕು ಸಮಿತಿ ಗಣರಾಜ್ಯೋತ್ಸವ ಪ್ರಯುಕ್ತ ಸೋಮವಾರಪೇಟೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋಗೆ ಜೂನಿಯರ್ಸ್ ವಿಭಾಗದಲ್ಲಿ ಪ್ರಥಮ ಹಾಗೂ ಸೀನಿಯರ್ಸ್ ವಿಭಾಗದಲ್ಲಿ ತೃತೀಯ ಬಹುಮಾನ ದೊರೆತ್ತಿದೆ.
ಜೂನಿಯರ್ಸ್ ವಿಭಾಗದಲ್ಲಿ ಮೊನಾಲಿ, ಸಿಂಚನ, ಸಾನ್ವಿಕ, ದಿಶಾ, ಲಹರಿ, ವಿಶಾಕ್, ಆಧ್ಯಾಶ್ರೀ, ಲವಿಶ್, ದಿಯಾ, ಲೀಶ, ಗ್ರಂಥ, ಧೃತಿ ಹಾಗೂ ಸೀನಿಯರ್ಸ್ ವಿಭಾಗದಲ್ಲಿ ಯಾನ ಶೆಟ್ಟಿ, ಆರಾಧ್ಯ, ಆಧ್ಯ ದೇಚಮ್ಮ, ಶಿವ ಕುಮಾರ್, ಕೀರ್ತನ್, ವೆನಿಷಾ, ಪ್ರಜ್ಞಾ, ತೇಜಸ್, ಜಾನ್ವಿ ಬೋಜಮ್ಮ, ತಶ್ಮಿತ, ವರ್ಣಿಕ, ಜನನಿ, ಆರ್ಯನ್, ರೋಷನ್, ಐಶ್ವರ್ಯ, ಅಭಿನವ್ ಭಾಗವಹಿಸಿದ್ದರು.
ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋದ ನೃತ್ಯ ಸಂಯೋಜಕ ಅಭಿಷೇಕ್ ಮಡಿಕೇರಿ ಅವರ ನಿರ್ದೇಶನದಲ್ಲಿ ನೃತ್ಯ ಮೂಡಿ ಬಂತು.












