ಸುಂಟಿಕೊಪ್ಪ,ಜ.29 NEWS DESK : ಗಣರಾಜ್ಯೋತ್ಸವದ ಪ್ರಯುಕ್ತ ಸುಂಟಿಕೊಪ್ಪ ಜೆಸಿಐ ವತಿಯಿಂದ ಶಾಲಾ ಮಕ್ಕಳಿಗೆ ದೇಶ ಭಕ್ತಿಗೀತೆ, ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ನಡೆಸಲಾಯಿತು.
ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ದೇಶ ಭಕ್ತಿಗೀತೆ, ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭ ಜೆಸಿಐ ಸಂಸ್ಥೆ ಅಧ್ಯಕ್ಷ ಸಂಪತ್ ಕುಮಾರ್, ಸದಸ್ಯರಾದ ಡೆನ್ನೀಸ್ ಡಿಸೋಜ, ಪಲ್ಸಿ ಡೆನ್ನೀಸ್, ಶಾಲಾ ಮುಖ್ಯೋಪದ್ಯಾರಾದ ಬಾಲಕೃಷ್ಣ, ಅದ್ಯಾಪಕರುಗಳು ಹಾಜರಿದ್ದರು.









