ವಿರಾಜಪೇಟೆ ಜ.29 NEWS DESK : ಗಣರಾಜ್ಯೋತ್ಸವ ಪ್ರಯುಕ್ತ ಕೊಡಮಾಡುವ ರಾಷ್ಟ್ರಪತಿ ಪದಕಕ್ಕೆ ಬೆಂಗಳೂರಿನಲ್ಲಿ ಸಿಐಡಿ ವಿಭಾಗದಲ್ಲಿ ಡಿವೈಎಸ್ಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮೂಲತಃ ಕೊಡಗಿನವರಾದ ಬಿ.ಎಸ್.ಶ್ರೀನಿವಾಸ್ ರಾಜ್ ಭಜನರಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯಂದು ರಾಜ್ಯಪಾಲ ಥಾವರ್ ಚಂದ್ ಗೆಹಾಲೊಟ್ ಪದಕ ಪ್ರದಾನ ಮಾಡಿದರು.
ಬಿ.ಎಸ್.ಶ್ರೀನಿವಾಸ್ ರಾಜ್ ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದು, ಇದೀಗ ರಾಷ್ಟ್ರಪತಿ ಪದಕ ಪಡೆಯುವುದರ ಮೂಲಕ ಹುಟ್ಟೂರು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರು ವಿರಾಜಪೇಟೆಯ ಬೇಟೋಳಿ ರಾಮನಗರದ ನಿವಾಸಿ ಹೆಚ್.ಕೆ.ಸಣ್ಣಯ್ಯ ಹಾಗೂ ದಿವಂಗತ ಲಕ್ಷ್ಮಮ್ಮ ದಂಪತಿಗಳ ಪುತ್ರರಾಗಿದ್ದಾರೆ.









