ಮಡಿಕೇರಿ ಜ.30 NEWS DESK : ಸಮಾಜದಲ್ಲಿ ಕ್ರೀಡಾಕೂಟಗಳಿಂದ ಸೌಹಾರ್ದತೆ ಬೆಳೆಯಲು ಸಹಕಾರಿಯಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಫುಟ್ಬಾಲ್ ಕಪ್ ಸೆಮಿಫೈನಲ್ ಪಂದ್ಯವನ್ನು ಉದ್ಘಾಟಿಸಿ ಶಾಸಕರು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ವಿವಿಧ ಜನಾಂಗ ಹಾಗೂ ಸಮಾಜ ಬಾಂಧವರ ನಡುವೆ ಕ್ರೀಡಾಕೂಟಗಳು ನಡೆಯುತ್ತಿದೆ.
ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಹಿಂದೂ ಮಲಯಾಳಿ ಫುಟ್ಬಾಲ್ ಕಪ್ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಸಮಾಜ ಬಾಂಧವರನ್ನು ಕ್ರೀಡೆಯ ಮುಖಾಂತರ ಒಂದುಗೂಡಿಸುವುದು ಒಳ್ಳೆಯ ವಿಷಯವಾಗಿದೆ ಎಂದ ಶಾಸಕರು, ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಫುಟ್ಬಾಲ್ ಕಪ್ ಸಂಸ್ಥಾಪಕ ಮರಗೋಡುವಿನ ದರ್ಶನ್ ಸುಕುಮಾರ್ ಅವರನ್ನು ಅಭಿನಂದಿಸಿದರು.
ಇದೇ ಸಂದರ್ಭ ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಫುಟ್ಬಾಲ್ ಕಪ್ ಸಮಿತಿ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಸ್ಥಾಪಕ ದರ್ಶನ್ ಸುಕುಮಾರ್, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ,ಸಜೀಶ್ ಚೆನ್ನಯ್ಯನಕೋಟೆ, ರತೀಶ್ ಚೆನ್ನಯ್ಯನಕೋಟೆ, ಬಾಲಕೃಷ್ಣ ಕೆಪಿ,ವಿವೇಕಾನಂದ ಮರಗೋಡು ಇದ್ದರು.








